ಅಬ್ಬಾ.. ರೋಬೋಟ್ ಬಳಸಿ ಕಿಡ್ನಿ ಕಸಿ ಮಾಡಿದ್ರು!

ಗುರುವಾರ, 22 ಡಿಸೆಂಬರ್ 2016 (11:35 IST)
ಬೆಂಗಳೂರು: ರಜನೀಕಾಂತ್ ಸಿನಿಮಾದಲ್ಲಿ ರೋಬೋಟ್ ಏನೆಲ್ಲಾ ಮಾಡುತ್ತದೆ ಎಂದು ನೋಡಿದ್ದೇವಲ್ಲ. ಅದು ನಿಜ ಜೀವನದಲ್ಲೂ ಸಾಧ್ಯ ಎಂದು ಬೆಂಗಳೂರು ಮೂಲದ ಆಸ್ಪತ್ರೆಯೊಂದು ಇಂತಹದ್ದೊಂದು ಸಾಧನೆ ಮಾಡಿದೆ.


ಸರೋಜಿತ್ ಅದಕ್ ಎನ್ನುವ ಮಹಿಳೆಗೆ ಕಿಡ್ನಿ ಕಸಿ ಮಾಡಬೇಕಿತ್ತು. ಕಿಡ್ನಿ ಕಸಿ ಮಾಡುವ ಶಸ್ತ್ರಚಿಕಿತ್ಸೆ ಸುಲಭವಲ್ಲ. ತುಂಬಾ ಸೂಕ್ಷ್ಮವಾಗಿ ಮಾಡಬೇಕು. ಹೀಗಾಗಿ ವೈದ್ಯರು ರೋಬೋಟ್ ಸಹಾಯ ಪಡೆದು ಆಕೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದರು. ವಿಶೇಷವೆಂದರೆ ಆಕೆಗೆ ಕಿಡ್ನಿ ದಾನ ಮಾಡಿದ್ದು ಆಕೆಯ ಅತ್ತೆಯೇ.

ಇದೇ ರೀತಿ ಸುದೀಪ್ತಾ ಕುಮಾರ್ ಬಾಲಾ ಎನ್ನುವ ಮಹಿಳೆಗೂ ಇದೇ ರೀತಿ ವೈದ್ಯರು ಶಸ್ತ್ರ ಚಿಕಿತ್ಸೆ ನೆರವೇರಿದರಂತೆ. ಆಧುನಿಕ ಜಗತ್ತಿನಲ್ಲಿ ಏನೆಲ್ಲಾ ಸಾಧ್ಯ ಎನ್ನುವುದನ್ನು ವೈದ್ಯರು ಮತ್ತೊಮ್ಮೆ ನಿರೂಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ