ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ ನೋಡಿ

ಮಂಗಳವಾರ, 10 ಏಪ್ರಿಲ್ 2018 (06:35 IST)
ಬೆಂಗಳೂರು : ಶತಮಾನಗಳಿಂದಲೂ ಬಳಕೆಯಾಗುತ್ತಿರುವ ತೆಂಗಿನೆಣ್ಣೆ ಹಲವಾರು ಆರೋಗ್ಯ ಲಾಭ ಗಳನ್ನು ನೀಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತೆಂಗಿನೆಣ್ಣೆ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಲವಾರು ಕಾಯಿಲೆಗಳಿಗೂ ಮನೆಮದ್ದಾಗಿ ಅದು ಬಳಕೆಯಾಗುತ್ತಿದೆ. ಆದರೆ ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆಯೇ ಎಂಬ ಗೊಂದಲ  ಹಲವರಲ್ಲಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.


ಎಣ್ಣೆ ಬಿಸಿಯಾದಾಗ ಅದರಲ್ಲಿಯ ಪ್ರಮುಖ ಅಂಶವಾದ ಕೊಬ್ಬು ನಷ್ಟವಾಗುತ್ತದೆ. ಹೀಗಾಗಿ ಅಡುಗೆಗೆ ಬಳಸಲು ಸೂಕ್ತವಾದ ಖಾದ್ಯತೈಲವನ್ನು ಗುರುತಿಸುವುದು ಮುಖ್ಯವಾಗಿದೆ.


ಕೆಲವು ತೈಲಗಳನ್ನು ಕಾಯಿಸಿದಾಗ ಅವು ತಮ್ಮಲ್ಲಿರುವ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುತ್ತವೆ. ಅವುಗಳಲ್ಲಿಯ ಕೊಬ್ಬು ವಿಭಜನೆಗೊಂಡು ಹಾನಿಕಾರಕ ರ್ಯಾಡಿಕಲ್ ಗಳು ಉತ್ಪತ್ತಿಯಾಗುವುದು ಇದಕ್ಕೆ ಕಾರಣವಾಗಿದೆ. ಇಂತಹ ಎಣ್ಣೆಯನ್ನು ಅಡುಗೆಗೆ ಬಳಸಿದಾಗ ಅದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದರೆ ತೆಂಗಿನೆಣ್ಣೆ ಬಳಸಿದಾಗಿ ಇಂತಹ ತಾಪತ್ರಯಗಳಿರುವುದಿಲ್ಲ. ಅದು ತನ್ನಲ್ಲಿಯ ಪೌಷ್ಟಿಕಾಂಶಗಳನು ಕಳೆದುಕೊಳ್ಳುವುದಿಲ್ಲ. ಹೀಗಾಗಿಯೇ ಅದನ್ನು ಅಡುಗೆಗೆ ಅತ್ಯಂತ ಸೂಕ್ತವಾದ ಎಣ್ಣೆ ಎಂದು ಪರಿಗಣಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ