ಕಾಂಡೋಮ್ ಬಳಸಿದರೆ ಮಕ್ಕಳಾಗಲ್ವಾ?!

ಮಂಗಳವಾರ, 27 ಆಗಸ್ಟ್ 2019 (09:21 IST)
ಬೆಂಗಳೂರು: ಗರ್ಭನಿರೋಧಕ ಸಾಧನ ಎಂದರೆ ಮೊದಲಿನ ಸಾಲಿನಲ್ಲಿ ನಿಲ್ಲುವುದು ಕಾಂಡೋಮ್. ಆದರೆ ಕಾಂಡೋಮ್ ಬಳಸಿ ಮಿಲನ ಕ್ರಿಯೆ ಮಾಡುವುದರಿಂದ ಮುಂದೆ ಮಕ್ಕಳಾಗಲು ತೊಂದರೆಯಾಗುತ್ತದೆಯೇ?


ಸುದೀರ್ಘ ಸಮಯದವರೆಗೆ ಕಾಂಡೋಮ್ ಬಳಸುವುದರಿಂದ ಜನನಾಂಗದ ಮೇಲೆ ಪರಿಣಾಮ ಬೀರುತ್ತದೆಯೇ? ಇದರಿಂದ ಮುಂದೆ ಮಕ್ಕಳಾಗಲು ತೊಂದರೆಯಾಗುತ್ತದೆಯೇ ಎಂದು ಕೆಲವರಿಗೆ ಅನುಮಾನಗಳಿರುತ್ತವೆ.

ಆದರೆ ಅಂತಹ ಆತಂಕವೇನೂ ಬೇಕಾಗಿಲ್ಲ. ಸುಲಭ ಮತ್ತು ಸರಳ ಗರ್ಭನಿರೋಧಕ ಸಾಧನವೆಂದರೆ ಕಾಂಡೋಮ್. ಇದನ್ನು ಸುದೀರ್ಘ ಸಮಯದವರೆಗೆ ಬಳಸಬಾರದು, ಬಳಸಿದರೆ ಅಡ್ಡಪರಿಣಾಮಗಳಾಗುತ್ತದೆ ಎನ್ನುವುದೆಲ್ಲಾ ತಪ್ಪು ಕಲ್ಪನೆ. ಇದರ ಬಗ್ಗೆ ವಿನಾಕಾರಣ ಭಯ ಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ