ಹುಣಸೆ ಹಣ್ಣು ಸೇವಿಸುವುದರಿಂದ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆಯೇ?
ಗುರುವಾರ, 16 ಜನವರಿ 2020 (06:20 IST)
ಬೆಂಗಳೂರು : ಪ್ರಶ್ನೆ : ನಾನು 32 ವರ್ಷದ ಅವಿವಾಹಿತ ವ್ಯಕ್ತಿ. ವಿಚಿತ್ರ ಸಮಸ್ಯೆಯೊಂದನ್ನು ಎದುರಿಸುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ನಾನು ಸಾಕಷ್ಟು ಹುಣಸೆಹಣ್ಣನ್ನು ತಿನ್ನುತ್ತಿದ್ದೆ. ಈಗ ಮೂರನಾಲ್ಕು ದಿನಗಳಿಂದ ನಾನು ಹುಣಸೆ ನೀರನ್ನು ನಿರಂತವಾಗಿ ಕುಡಿಯುತ್ತಿದ್ದೆ. ಅಂದಿನಿಂದ ನಾನು ನಿಮಿರುವಿಕೆ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದೇನೆ. ಹುಣಸೆ ಹಣ್ಣು ಸೇವಿಸುವುದರಿಂದ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆಯೇ? ಅಥವಾ ಇದು ಕಾಕತಾಳೀಯವೇ? ದಯವಿಟ್ಟು ಪರಿಹಾರ ಸೂಚಿಸಿ.
ಉತ್ತರ : ಹುಣಸೆ ಹಣ್ಣಿನ ಪ್ರಮಾಣ ಅಥವಾ ನೀವು ಸೇವಿಸುವ ಯಾವುದೇ ಉತ್ಪನ್ನಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ರಕ್ತ ತೆಳುವಾಗಿಸಲು ನೀವು ಈಗಾಗಲೇ ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ನಿಮ್ಮ ವೈದ್ಯರ ಬಳಿ ಪರೀಕ್ಷಿಸಿ. ಕೆಲವು ಆಹಾರಗಳು ನಿಮಗೆ ಉತ್ತಮ ಫಲಿತಾಂಶ ನೀಡಬಹುದು, ಇನ್ನು ಕೆಲವು ನಿಮಗೆ ಹಾನಿಯನ್ನುಂಟುಮಾಡಬಹುದು. ಆದಕಾರಣ ನಿಮ್ಮ ಆಹಾರದಲ್ಲಿ ಹೊಸದನ್ನು ಸೇರಿಸುವ ಮೊದಲು ಯಾವಾಗಲೂ ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ.