ಮೌಖಿಕ ಸಂಭೋಗದಿಂದ ಗಂಟಲು ನೋವು ಸಮಸ್ಯೆ ಉಂಟಾಗುತ್ತದೆಯೇ?

ಬುಧವಾರ, 10 ಜುಲೈ 2019 (09:00 IST)
ಬೆಂಗಳೂರು : ನನಗೆ 45 ವರ್ಷ. ನನ್ನ ಪತ್ನಿಗೆ 44 ವರ್ಷ. ನಾವು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ತಿಂಗಳಿಗೆ 5-6 ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತೇವೆ. ಹಾಗೇ ನಾವು ಒಮ್ಮೆಯಾದರೂ ಮೌಖಿಕ ಸಂಭೋಗ ನಡೆಸುತ್ತೇವೆ, ಆದರೆ ಈ ಮೌಖಿಕ ಸಂಭೋಗ ನಡೆಸಿದ ಮರುದಿನ ನಾವು ಗಂಟಲು ನೋವುತ್ತಿರುವುದನ್ನು ಗಮನಿಸಿದ್ದೇವೆ. ಇದರಿಂದ ನನ್ನ ಪತ್ನಿಯ ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಇದನ್ನು ತಡೆಯಲು ನಾವು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಹಾಗೂ ಮೌಖಿಕ ಸಂಭೋಗದಿಂದ ಈ ಪರಿಣಾಮ ಉಂಟಾಗಿದೆಯೇ?



ನಿಸ್ಸಂಶಯವಾಗಿ , ನಿಮ್ಮ ಗಂಟಲಿನಲ್ಲಿ ನೀವು ಮೌಖಿಕ ಸೋಂಕನ್ನು ಹೊಂದಿದ್ದೀರಿ. ಹಾಗೇ ಇದು ಪರಸ್ಪರ ಹರಡಿಕೊಂಡಿರಬಹುದು.  ಈ ಸೋಂಕನ್ನು ನಿವಾರಿಸಲು ನೀವು ಪ್ರತಿದಿನ ದಿನಕ್ಕೆ 2 ಬಾರಿ ಬೆಟಾಡಿನ್ ದ್ರಾವಣದಿಂದ ಗಾರ್ಗ್ಲಿಂಗ್ ಅನ್ನು ಮಾಡಿ. ಹೀಗೆ ಮಾಡಿದರೆ 15 ದಿನದಲ್ಲಿ ನಿಮ್ಮ ಗಂಟಲು ಸಮಸ್ಯೆ ಕಡಿಮೆಯಾಗುತ್ತದೆ. ನಿಮ್ಮ ಪತ್ನಿಗೆ ಅಸ್ತಮಾ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಚಿಕಿತ್ಸೆ ಪಡೆಯಿರಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ