ಉಗುರುಗಳಲ್ಲಿರುವ ಬಿಳಿ ಕಲೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಬುಧವಾರ, 10 ಜುಲೈ 2019 (08:46 IST)
ಬೆಂಗಳೂರು : ಕೆಲವರ ಉಗುರುಗಳಲ್ಲಿ ಬಿಳಿ ಕಲೆಗಳಿರುವುದನ್ನು ನಾವು ಗಮನಿಸಿರುತ್ತೇವೆ, ಇದು ಲ್ಯುಕೋನಿಚಿಯಾ ಕಾರಣದಿಂದಲೂ ಕೂಡ ಆಗಿರಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.




ನಿಂಬೆರಸ ಹಾಗೂ ಆಲಿವ್ ಆಯಿಲ್ ನಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ನಿಂಬೆಯ ರಸದಲ್ಲಿರುವ ವಿಟಮಿನ್ ಸಿ ಅಂಶವು ಉಗುರಿನಲ್ಲಾದ ಬಣ್ಣದ ಬದಲಾವಣೆ ಮತ್ತು ಬಿಳಿ ಚುಕ್ಕಿಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.. ಹಾಗೇ ಆಲಿವ್ ಎಣ್ಣೆಯು ಉಗುರನ್ನು ಪೋಷಿಸುವಂತಹ ಕೆಲಸ ಮಾಡುತ್ತದೆ.


2 ಟೇಬಲ್ ಸ್ಪೂನ್ ನಿಂಬೆ ರಸ, ಕೆಲವು ಹನಿ ಆಲಿವ್ ಆಯಿಲ್ ಸೇರಿಸಿ ಮತ್ತು ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ನಿಮ್ಮ ಉಗುರಿಗೆ ಹಚ್ಚಿಕೊಂಡು 25 ರಿಂದ 30 ನಿಮಿಷ ಹಾಗೆಯೇ ಬಿಡಿ.ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ ಇದನ್ನು ನೀವು ಪ್ರತಿದಿನವೂ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ