ಸುಖ ಲೈಂಗಿಕ ಜೀವನಕ್ಕೆ ಮೂರು ಸೂತ್ರಗಳು

ಶನಿವಾರ, 22 ಜುಲೈ 2017 (09:01 IST)
ಬೆಂಗಳೂರು: ಕೆಲವು ಚಟಗಳು ನಮ್ಮ ಲೈಂಗಿಕ ಜೀವನಕ್ಕೇ ಕುತ್ತು ತರಬಹುದು. ಸಂಗಾತಿಯನ್ನು ತೃಪ್ತಿ ಪಡಿಸಬೇಕಾದರೆ, ಕೆಲವು ಚಟ, ಆಹಾರಗಳಿಂದ ದೂರವಿದ್ದರೆ ಒಳ್ಳೆಯದು.

 
ಮದ್ಯಪಾನ
ಮದ್ಯಪಾನ ಎನ್ನುವುದು ಎಲ್ಲಾ ರೀತಿಯಿಂದಲೂ ಅಪಾಯಕರವೇ. ಮದ್ಯಪಾನ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗವುದಕ್ಕೆ ಕಾರಣವಾಗುವುದು. ಹಾಗಾಗಿ ಮದ್ಯ, ಧೂಮಪಾನದಂತಹ ಕೆಟ್ಟ ಚಟಗಳಿಂದ ದೂರವಿರಿ.

ರಕ್ತದೊತ್ತಡ, ಔಷಧಗಳ ಸೇವನೆ
ಆದಷ್ಟು ಒತ್ತಡ ರಹಿತ ಜೀವನ ಸುಖ ಲೈಂಗಿಕ ಜೀವನಕ್ಕೆ ದಾರಿ ಎನ್ನುವುದನ್ನು ಮರೆಯದಿರಿ. ಅಷ್ಟೇ ಅಲ್ಲದೆ, ಸಣ್ಣ ಪುಟ್ಟದ್ದಕ್ಕೆಲ್ಲಾ  ಔಷಧ ತೆಗೆದುಕೊಳ್ಳುವುದನ್ನು ಬಿಡಿ. ದೀರ್ಘ ಕಾಲದ ಔಷಧ ಸೇವನೆಯೂ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.

ಸಕ್ಕರೆ
ಸಿಹಿ ತಿನಿಸು ಎಲ್ಲರಿಗೂ ಇಷ್ಟವೇ. ಆದರೆ ಹೆಚ್ಚು ಸಿಹಿ ಪದಾರ್ಥ ತಿನ್ನುವುದರಿಂದ ಮಧುಮೇಹ ಮಾತ್ರವಲ್ಲ, ಸೆಕ್ಸ್ ಲೈಫ್ ಗೂ ತೊಂದರೆಯಾಗಬಹುದು. ಸಕ್ಕರೆ ಅಂಶ ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಹೆಚ್ಚುವಂತೆ ಮಾಡುತ್ತದೆ. ಇದು ಲೈಂಗಿಕ ಸಾಮರ್ಥ್ಯ ಕುಗ್ಗಿಸಬಹುದು.

ಇದನ್ನೂ ಓದಿ..  ಭಾರತ ಸರಣಿಯ ಆರಂಭದಲ್ಲೇ ಶ್ರೀಲಂಕಾಗೆ ವಿಘ್ನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ