ಹಾಲಿನ ಜತೆಗೆ ಬಾಳೆಹಣ್ಣು ಸೇವಿಸುವ ಅಭ್ಯಾಸವೇ? ಹಾಗಿದ್ದರೆ ಸ್ವಲ್ಪ ಕೇಳಿ!

ಗುರುವಾರ, 18 ಮೇ 2017 (07:01 IST)
ಬೆಂಗಳೂರು: ಹಾಲು ಮತ್ತು ಬಾಳೆ ಹಣ್ಣನ್ನು ಮಿಲ್ಕ್ ಶೇಕ್ ಮಾಡಿ ಸೇವಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಆದರೆ ಹಾಗೆ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವೇನು? ನೋಡೋಣ.

 
ಹಾಲು ಮತ್ತು ಬಾಳೆ ಹಣ್ಣಿನಲ್ಲಿ ಪ್ರತ್ಯೇಕ ಪೋಷಕಾಂಶಗಳಿರುತ್ತವೆ. ಎರಡನ್ನೂ ಮಿಕ್ಸ್ ಮಾಡಿ ಸೇವಿಸುವುದರಿಂದ ಈ ಪೋಷಕಾಂಶಗಳನ್ನು ನಾಶ ಮಾಡಿದಂತೆ. ಇದರಿಂದ ನಮ್ಮ ಶರೀರಕ್ಕೆ ಪ್ರಯೋಜನವಾಗದು.

ಆದರೆ ಬಾಡಿ ಬಿಲ್ಡರ್ ಗಳು ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಒಳ್ಳೆಯದೇ. ಆದರೆ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸಬೇಡಿ ಎನ್ನುತ್ತಾರೆ ತಜ್ಞರು. ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸುವುದರಿಂದ ಕಫದ ಅಂಶ ಶೇಖರಣೆಯಾಗುವ ಸಂಭವ ಹೆಚ್ಚು. ಇದರಿಂದ ಉಸಿರಾಟದ ತೊಂದರೆ ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ತಜ್ಞರು. ಹಾಗಾಗಿ ಇವೆರಡನ್ನೂ ಜತೆಯಾಗಿ ಸೇವಿಸಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ