ಹಸಿದ ಹೊಟ್ಟೆಯಲ್ಲಿ ಇವುಗಳನ್ನು ತಿಂದರೆ ತೊಂದರೆ ಖಂಡಿತಾ

ಶನಿವಾರ, 4 ಫೆಬ್ರವರಿ 2017 (08:06 IST)
ಬೆಂಗಳೂರು: ಮನುಷ್ಯ ಏನನ್ನು ಸಹಿಸಿಕೊಂಡರೂ, ಹಸಿವನ್ನು ತಡೆಯಲಾಗುವುದಿಲ್ಲ. ಹಾಗಂತ ಹೊಟ್ಟೆ ಹಸಿದಿದೆಯೆಂದು ಕೈಗೆ ಸಿಕ್ಕಿದ್ದನ್ನು ತಿನ್ನಲಾಗುವುದಿಲ್ಲ. ಹಾಗಿದ್ದರೆ ಹಸಿವಾಗಿರುವಾಗ ಯಾವುದೆಲ್ಲಾ ಆಹಾರ ತಿಂದರೆ ತೊಂದರೆ ನೋಡಿ.


ಟೊಮೆಟೊ
ಟೊಮೆಟೊ ಆರೋಗ್ಯಕರವೇನೋ ನಿಜ. ಆದರೆ ಇದರಲ್ಲಿ ಹುಳಿ ಅಂಶ ಜಾಸ್ತಿ. ಹಾಗಾಗಿ ಇದು ಹಸಿದ ಹೊಟ್ಟೆಯಲ್ಲಿ ಅಸಿಡಿಟಿ ಉತ್ಪಾದನೆಗೆ ಕಾರಣವಾಗಬಹುದು. ಇದರಲ್ಲಿ ಗ್ಯಾಸ್ಟ್ರಿಕ್ ಗೆ ಕಾರಣವಾಗುವ ಹಲವು ಅಂಶಗಳಿರುವುದರಿಂದ ಎದೆ ಉರಿ, ಹೊಟ್ಟೆ ಉರಿಗೆ ಕಾರಣವಾಗಬಹುದು.

ಸೋಡಾ
ಹಸಿದ ಹೊಟ್ಟೆಯಲ್ಲಿ ಸೋಡಾ ಸೇವನೆಯಂತೂ ತೀರಾ ಅಪಾಯಕಾರಿ. ಇದು ಅಸಿಡಿಟಿಗೆ ಹೇಳಿ ಮಾಡಿಸಿದ ಪಾನೀಯ. ಸಕ್ಕರೆ ಹಾಕಿ ಸೋಡಾವನ್ನು ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಹಾಳಾಗುವುದು ಖಂಡಿತಾ. ಇದರಲ್ಲಿರುವ ಸಕ್ಕರೆ ಅಂಶ ನೇರ ನಿಮ್ಮ ರಕ್ತಕ್ಕೆ ಸೇರಿ ಅಪಾಯ ಉಂಟು ಮಾಡುತ್ತದೆ.

ಹಸಿರು ತರಕಾರಿಗಳು
ಇದು ನಿಜ. ಹಸಿರು ತರಕಾರಿಗಳಲ್ಲಿ ಹೇರಳ ಪೋಷಕಾಂಶಗಳಿರುವುದೇನೋ ನಿಜ. ಆದರೆ ಹಸಿ ತರಕಾರಿಯಲ್ಲಿ ಅಮಿನೋ ಆಸಿಡ್ ಮತ್ತು ಎದೆ ಉರಿ ಹಾಗೂ ಹೊಟ್ಟೆ ನೋವಿಗೆ ಕಾರಣವಾಗಬಹುದು.

ಮಜ್ಜಿಗೆ
ಮಜ್ಜಿಗೆ ಮೊದಲೇ ಹುಳಿಕಾರಕ ದ್ರವ. ಮಜ್ಜಿಗೆಯಲ್ಲಿರುವ ಬ್ಯಾಕ್ಟೀರಿಯಾ ಉದರದಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನೂ ಕೊಲ್ಲಬಹುದು. ಇದರಿಂದ ಸಹಜವಾಗಿ ಅಸಿಡಿಟಿ ಉಂಟಾಗಬಹುದು.

ಖಾರದ ಆಹಾರ
ಖಾರ ಖಾರದ ಕುರುಕಲು ತಿಂಡಿಗಳನ್ನು ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ