ದಾಳಿಂಬೆ ತಿಂದು ಸಿಪ್ಪೆ ಬಿಸಾಕಬೇಡಿ, ಅದರಲ್ಲಿದೆ ಔಷಧಿ!

ಗುರುವಾರ, 29 ಡಿಸೆಂಬರ್ 2016 (08:56 IST)
ಬೆಂಗಳೂರು: ಸಾಮಾನ್ಯವಾಗಿ ದಾಳಿಂಬೆ ಹಣ್ಣು ಎಲ್ಲರಿಗೂ ಇಷ್ಟವಿರುತ್ತದೆ. ದಾಳಿಂಬೆ ಹಣ್ಣು ತಿಂದ ಮೇಲೆ ಸಿಪ್ಪೆ ಕಸದ ಬುಟ್ಟಿಗೆ ಸೇರಿಸುತ್ತೇವೆ. ಆದರೆ ಸಿಪ್ಪೆಯಲ್ಲೂ ಔಷಧೀಯ ಗುಣವಿದೆ.


ದಾಳಿಂಬೆಯಲ್ಲಿ ವಿಟಮಿನ್ ಎ, ಕೆ, ಇದ್ದು ಚರ್ಮ,  ಕೂದಲುಗಳ ಬೆಳವಣಿಗೆಗೆ ಉತ್ತಮವಾದದ್ದು. ಅಲ್ಲದೆ ದೇಹದಲ್ಲಿ ರಕ್ತ ತುಂಬಲೂ ಇದು ಅತ್ಯುತ್ತಮ ಹಣ್ಣು. ಇದರ ಸಿಪ್ಪೆ ಹಲವಾರು ಮನೆ ಮದ್ದಿನಲ್ಲಿ ಬಳಕೆಯಾಗುತ್ತದೆ.

ಹೊಟ್ಟೆ ನೋವಿನೊಂದಿಗೆ ಮಲ ವಿಸರ್ಜನೆಯಾಗುತ್ತಿದ್ದರೆ, ಬೇಧಿಯಾಗುತ್ತಿದ್ದರೆ, ಮಲ ವಿಸರ್ಜಿಸುವಾಗ ರಕ್ತ ಕಾಣಿಸಿಕೊಳ್ಳುತ್ತಿದ್ದರೆ, ಇದರ ಸಿಪ್ಪೆಯನ್ನು ಒಣಗಿಸಿ ಕಷಾಯ ಮಾಡಿ ಕುಡಿದರೆ ಉತ್ತಮ ಮನೆ ಔಷಧ. ಶುದ್ಧ ನೀರಿಗೆ ಇದರ ಒಣಗಿದ ಸಿಪ್ಪೆಯನ್ನು ಹಾಕಿ ಕುದಿಸಿದರೆ ಕಷಾಯ ರೆಡಿಯಾಗುತ್ತದೆ.

ಒಂದು ವೇಳೆ ಕಷಾಯ ಕುಡಿಯಲು ಇಷ್ಟವಿಲ್ಲದಿದ್ದರೆ, ಕಾಯಿತುರಿ, ಜೀರಿಗೆ, ಉಪ್ಪಿನೊಂದಿಗೆ ಒಣಗಿದ ದಾಳಿಂಬೆ ಸಿಪ್ಪೆಯನ್ನು ಸೇರಿಸಿ ತಂಬುಳಿ ಮಾಡಿಕೊಂಡು ಕುಡಿಯಬಹುದು. ಇದು ಹೊಟ್ಟೆಗೂ ತಂಪು, ಜೀರ್ಣಕ್ರಿಯೆಗೂ ಸಹಕಾರಿ. ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ