ಹೊಟ್ಟೆ ಸುತ್ತ ಬೊಜ್ಜು ಬೆಳೆದಿದೆಯಾ? ಹಾಗಿದ್ದರೆ ಹುಷಾರಾಗಲೇಬೇಕು!

ಬುಧವಾರ, 3 ಅಕ್ಟೋಬರ್ 2018 (08:56 IST)
ಬೆಂಗಳೂರು: ಹೊಟ್ಟೆ ಸುತ್ತ ಬೊಜ್ಜು ಬೆಳೆದಿದೆ. ಅಸಹ್ಯವಾಗಿ ಕಾಣುತ್ತಿದ್ದೇನೆಂದು ಬೇಜಾರು ಪಡುತ್ತಿದ್ದೀರಾ? ಹಾಗಿದ್ದರೆ ಬೇಸರದ ಜತೆಗೆ ನೀವು ಈಗ ಎಚ್ಚೆತ್ತುಕೊಳ್ಳಬೇಕಾದ ಅಗತ್ಯ ಬಂದಿದೆ.

ಆರೋಗ್ಯ ತಜ್ಞರ ಪ್ರಕಾರ ಹೊಟ್ಟೆ ಸುತ್ತ ಬೊಜ್ಜು ಬೆಳೆಯುತ್ತಿದೆಯೆಂದರೆ ಅದು ಹೃದಯ ಖಾಯಿಲೆಯೊಂದರ ಮುನ್ಸೂಚನೆಯೂ ಇರಬಹುದಂತೆ!

ಅಧ್ಯಯನವೊಂದರ ಪ್ರಕಾರ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಹೊಟ್ಟೆ ಸುತ್ತ ಬೊಜ್ಜು ಬೆಳೆಯುತ್ತಿದೆಯೆಂದರೆ ಅದು ಹೃದಯ ಖಾಯಿಲೆಯ ಮುನ್ಸೂಚನೆ. ಇಂತಹ ಮಹಿಳೆಯರಲ್ಲಿ ಶೇ.66 ಮತ್ತು ಪುರುಷರದಲ್ಲಿ ಶೇ. 71 ರಷ್ಟು ಹೃದಯ ಖಾಯಿಲೆ ಬರುವ ಸಂಭವವಿದೆ ಎಂದು ಅಧ‍್ಯಯನ ವರದಿ ಹೇಳಿದೆ. ಇದನ್ನು ತಡೆಗಟ್ಟಬೇಕೆಂದರೆ ಉತ್ತಮ ಪೋಷಕಾಂಶ ಭರಿತ ಆಹಾರ ಸೇವನೆ ಮಾಡಬೇಕು ಮತ್ತು ಚೆನ್ನಾಗಿ ನಿದ್ರಿಸಬೇಕು ಎಂದು ದೆಹಲಿಯ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ