ಬೆಂಗಳೂರು: ಕೊರೋನಾ ಇರಲಿ, ಯಾವುದೇ ಮಾರಣಾಂತಿಕ ರೋಗವಿರಲಿ ಮನುಷ್ಯನ ಮೇಲೆ ಬೇಗನೇ ಪರಿಣಾಮ ಬೀರುವುದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ. ಹೀಗಾಗಿ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು ನಾವು ಪ್ರಯತ್ನಿಸಬೇಕು.
ಅದಕ್ಕಾಗಿ ಈ ಒಂದು ಕಷಾಯ ಮಾಡಿಕೊಂಡು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಉತ್ತಮ. ಇದಕ್ಕೆ ಬಳಕೆಯಾಗುವುದು ನಮ್ಮ ಅಡುಗೆ ಮನೆಯಲ್ಲೇ ಇರುವ ಕಾಳು ಮೆಣಸು, ಜೀರಿಗೆ, ಮೆಂತೆ, ಶುಂಠಿ, ತುಳಸಿ ಹಾಗೂ ರುಚಿಗೆ ಬೇಕಾದರೆ ಬೆಲ್ಲ.
ಕಾಳು ಮೆಣಸು, ಜೀರಿಗೆ ಮತ್ತು ಮೆಂತೆಯನ್ನು ಹದವಾಗಿ ಬಿಸಿ ಮಾಡಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಶುಂಠಿ ಹಾಗೂ ತುಳಸಿಯನ್ನು ಜಜ್ಜಿ ರಸ ತೆಗೆದು ಹಾಕಿ. ಚೆನ್ನಾಗಿ ಕುದಿಸಿದ ಬಳಿಕ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕುದಿಯಲು ಬಿಟ್ಟರೆ ಕಷಾಯ ರೆಡಿ. ಇದನ್ನು ಪ್ರತಿನಿತ್ಯ ಸೇವಿಸುವಿದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.