ಕಾಮಾಲೆ ರೊಗಕ್ಕೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಗುರುವಾರ, 28 ಡಿಸೆಂಬರ್ 2017 (10:04 IST)
ಬೆಂಗಳೂರು: ಮನುಷ್ಯನಿಗೆ ಬರುವ ರೋಗಗಳಲ್ಲಿ ಕಾಮಾಲೆ ರೋಗವು ಒಂದು. ಇದು ಒಂದು ಮಾರಣಾಂತಿಕ ರೋಗವಾಗಿದ್ದು, ಮಿತಿಮೀರಿದರೆ ಜೀವಕ್ಕೆ ಆಪತ್ತು ತರುತ್ತದೆ. ಕಾಮಾಲೆ ಬಂದ ಮನುಷ್ಯರ ಕಣ್ಣು ,ಉಗುರು, ನಾಲಿಗೆಯಲ್ಲಿ ಹಳದಿ ಬಣ್ಣ ಕಂಡುಬರುತ್ತದೆ. ಇದನ್ನು ಕಡಿಮೆ ಇರುವಾಗಲೆ ಗುಣಪಡಿಸಿಕೊಳ್ಳಬೇಕು. ಅದನ್ನು ಕೆಲವು ಮನೆಮದ್ದಿನಿಂದ ಗುಣಪಡಿಸಬಹುದು.


ಪೇರಳೆ ಹಣ್ಣನ್ನು ಜೀರಿಗೆ ಪುಡಿಯಲ್ಲಿ ಅದ್ದಿ ಒಂದು ರಾತ್ರಿ ಅದನ್ನು ಮಂಜು ಬೀಳುವ ಜಾಗದಲ್ಲಿಡಬೇಕು. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ವಾರಗಳ ತನಕ ತಿನ್ನುತ್ತಾ ಬಂದರೆ ಕಾಮಾಲೆ ರೊಗ ನಿವಾರಣೆಯಾಗುತ್ತದೆ. 1ಚಮಚ ಹುಣಸೆಗೊಜ್ಜಿಗೆ ½ ಚಮಚ ಜೀರಿಗೆ ಪುಡಿ , 1ಚಮಚ ಜೇನುತುಪ್ಪ ಸೇರಿಸಿ ಒಂದುವಾರ ಸೇವಿಸಿದರೆ ಕಾಮಾಲೆ ದೂರವಾಗುತ್ತದೆ.


ಮಾವಿನಕಾಯಿಗೆ ಕಾಳುಮೆಣಸು, ಜೇನುತುಪ್ಪವನ್ನು ಹಚ್ಚಿಕೊಂಡು ತಿಂದರೆ ಪಿತ್ತಕೋಶ ಶುದ್ಧಿಯಾಗುವುದರ ಜೊತೆಗೆ ಪಿತ್ತರಸವೂ ವೃದ್ಧಿಸುತ್ತದೆ. 1 ಗ್ಲಾಸ್ ಹಸುವಿನ ಹಾಲಿಗೆ 1 ಚಮಚ ಒಣಶುಂಠಿ ಪುಡಿ ಬೇರೆಸಿ ದಿನಕ್ಕೆ ಒಂದೆರಡು ಬಾರಿ ಸೇವಿಸುತ್ತಾ ಬಂದರೆ ಕಾಮಾಲೆ ರೋಗದಿಂದ ಪಾರಾಗಬಹುದು. ದೊಡ್ಡ ಪತ್ರೆ ಎಲೆಗಳನ್ನು ಚೆನ್ನಾಗಿ ಜಗಿದು ರಸವನ್ನು ನುಂಗುತ್ತಿದ್ದರೆ ಕಾಮಾಲೆ ರೊಗ ನಿವಾರಣೆಯಾಗುವುದು. ಆದರೆ ಇದನ್ನು 1 ವಾರಗಳ ತನಕ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ