ಪುರುಷರೇ ಆರೋಗ್ಯಕರವಾದ ವೀರ್ಯಾಣುಗಳು ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸೂಕ್ತ ಪರಿಹಾರ
ಬುಧವಾರ, 20 ಡಿಸೆಂಬರ್ 2017 (07:54 IST)
ಬೆಂಗಳೂರು: ನಿದ್ದೆ ಕಡಿಮೆಯಾದರೂ ಹಾಗು ಹೆಚ್ಚಾದರೂ ಎಲ್ಲರಿಗೂ ತೊಂದರೆಯಾಗುತ್ತದೆ, ಅದರಲೂ ಹುಡುಗರಿಗಂತು ಈ ವಿಷಯದಲ್ಲಿ ಎಚ್ಚರವಾಗಿರಬೇಕು. ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಬೇಕು ಎಂದು ನಮ್ಮ ಹಿರಿಯರು ಹೇಳುವುದು ಈಗ ನಿಜವಾಗಿದೆ.
ಇತ್ತಿಚಿಗೆ ನಿದ್ರೆಗೆ ಸಂಬಂಧಿಸಿದಂತೆ ಹೊಸ ವಿಷಯ ತಿಳಿದಿಬಂದಿದೆ. ನಿದ್ದೆ ಕಡಿಮೆಯಾದರೂ, ಜಾಸ್ತಿಯಾದರೂ ಪುರುಷರಲ್ಲಿನ ವೀರ್ಯಾಣು ಗುಣಮಟ್ಟ ಕುಸಿಯುತ್ತದೆ ಎಂದು ಸಂಶೋಧಕರು ಪರಿಶೀಲಿಸಿ ಹೇಳಿದ್ದಾರೆ. ಸಂಶೋಧಕರು ನಿದ್ದೆಯ ಆಧಾರದ ಮೇಲೆ ಪುರುಷರ ವೀರ್ಯಕಣಗಳ ಸಂಖ್ಯೆ, ಆಕಾರ, ಚಲನೆಯನ್ನು ಪರಿಶೀಲಿಸಿದರು. 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿದವರಲ್ಲಿ ವೀರ್ಯಾ ಕಣಗಳ ಗುಣಮಟ್ಟ ಚೆನ್ನಾಗಿದ್ದು, 6 ಗಂಟೆಗಳಿಗಿಂತ ಕಡಿಮೆ, 9 ಗಂಟೆಗಳಿಗಿಂತ ಹೆಚ್ಚಿನ ಸಮಯ ನಿದ್ದೆ ಮಾಡಿದವರಲ್ಲಿ ವೀರ್ಯಾದ ಗುಣಮಟ್ಟ ಕಡಿಮೆಯಾಗಿರುವುದು ತಿಳಿದುಬಂದಿದೆ.
ತಡವಾಗಿ ನಿದ್ದೆ ಮಾಡುವುದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳದಿರುವುದು ತುಂಬಾ ಹಾನಿಕರವಾಗಿದೆ.ಇದರಿಂದ ಆರೋಗ್ಯಕರವಾದ ವೀರ್ಯ ಕಣಗಳಿಗೆ ಹೊಡೆತ ಬೀಳುತ್ತದೆ. ಆದ ಕಾರಣ ಬಂಜೆತನದಿಂದ ನರಳುತ್ತಿರುವ ಪುರುಷರು ರಾತ್ರಿಹೊತ್ತು ಬೇಗ ನಿದ್ದೆಗೆ ಜಾರುವುದು ಉತ್ತಮವೆನ್ನುತ್ತಿದ್ದಾರೆ ಸಂಶೋಧಕರು. ರಾತ್ರಿ 8 ಗಂಟೆಗಳ ನಿದ್ದೆ ಮಾಡುವವರ ವೀರ್ಯ ಕಣಗಳು ಆರೋಗ್ಯವಾಗಿ, ಚುರುಕಾಗಿ ಇರುವುದು ಗೊತ್ತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ