ಈ ಕಾರಣಕ್ಕೆ ಬೆಲ್ಲ ಸೇವಿಸಲೇಬೇಕು!

ಶನಿವಾರ, 9 ಡಿಸೆಂಬರ್ 2017 (07:46 IST)
ಬೆಂಗಳೂರು: ಬೆಲ್ಲ ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ದಿನಸಿ ವಸ್ತು. ಇದು ಆರೋಗ್ಯಕ್ಕೆ ಕೊಡುವ ಕೊಡುಗೆ ಮಾತ್ರ ಅಸಾಮಾನ್ಯವಾದ್ದುದ್ದು.
 

ಶಕ್ತಿ ವರ್ಧಕ
ಹಿಂದಿನ ಕಾಲದಲ್ಲಿ ನೀರು ಕುಡಿಯುವಾಗ ಒಂದು ಚೂರು ಬೆಲ್ಲವನ್ನೂ ಸೇರಿಸಿ ಸೇವಿಸುತ್ತಿದ್ದರು. ಇದರ ಹಿಂದಿನ ಕಾರಣವೆಂದರೆ, ಬೆಲ್ಲ ಶಕ್ತಿ ವರ್ಧಕ.

ಮಲಬದ್ಧತೆಗೆ
ಬೆಲ್ಲದಲ್ಲಿ ನಾರಿನಂಶವಿರುವುದರಿಂದ ಮಲವಿಸರ್ಜನೆಗೆ ಸಹಕಾರಿ. ಕರುಳಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಇರುವವರು ಬೆಲ್ಲ ಸೇವಿಸುವುದು ಒಳಿತು.

ಜ್ವರದ ಲಕ್ಷಣವಿದ್ದರೆ
ಶೀತ, ಕೆಮ್ಮಿನಂತಹ ಜ್ವರದ ಲಕ್ಷಣಗಳಿದ್ದಾಗ ಬೆಲ್ಲ ಸೇವಿಸುವುದು ಉತ್ತಮ. ಹದ ಬಿಸಿನೀರಿಗೆ ಬೆಲ್ಲ ಸೇರಿಸಿಕೊಂಡು ಸೇವಿಸುವುದರಿಂದ ಶೀತದ ಲಕ್ಷಣ ಪರಿಹಾರವಾಗುತ್ತದೆ.

ರೋಗ ನಿರೋಧಕ ಶಕ್ತಿ
ಬೆಲ್ಲದಲ್ಲಿ ಸಾಕಷ್ಟು ಪೋಷಕಾಂಶಗಳು, ಖನಿಜಾಂಶಗಳು ಇದ್ದು, ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ