ತಲೆಹೊಟ್ಟು ನಿವಾರಣೆಗೆ ಈ ಆಹಾರ ಸೇವಿಸಿ!

ಗುರುವಾರ, 7 ಡಿಸೆಂಬರ್ 2017 (08:32 IST)
ಬೆಂಗಳೂರು: ತಲೆಹೊಟ್ಟು ಹೆಚ್ಚಿನವರನ್ನು ಕಾಡುವ ಸಮಸ್ಯೆ. ತಲೆಹೊಟ್ಟಿನ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಕೂದಲಿಗೆ ಏನೇನೋ ಹಚ್ಚಿಕೊಳ್ಳುವುದು ಮಾತ್ರವಲ್ಲ, ನಾವು ಸೇವಿಸುವ ಆಹಾರದಲ್ಲೂ ಪರಿಹಾರ ಕಂಡುಕೊಳ್ಳಬಹುದು.
 

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುವುದು ಅಥವಾ ಕೂದಲುಗಳಿಗೆ ಇದರ ರಸ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ಪರಿಹಾರ ಸಿಗಬಹುದು.

ಬಾಳೆ ಹಣ್ಣು
ವಿಟಮಿನ್ ಬಿ6, ಎ, ಸಿ, ಇ ಹೆಚ್ಚಿನ ಪ್ರಮಾಣದಲ್ಲಿರುವ ಬಾಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅಥವಾ ಮೊಸರಿನ ಜತೆಗೆ ಬಾಳೆ ಹಣ್ಣು ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ಪರಿಹಾರ.

ಆಪಲ್
ಆಪಲ್ ತಿನ್ನುತ್ತಿದ್ದರೆ ವೈದ್ಯರನ್ನೂ ದೂರವಿಡಬಹುದಂತೆ .ಅಪಾರ ಪೋಷಕಾಂಶಗಳ ಆಗರ ಆಪಲ್ ತಿನ್ನುತ್ತಿದ್ದರೆ ತಲೆ ಹೊಟ್ಟೂ ಬರದು.

ಚನ್ನಾ ಕಡಲೆ
ಚನ್ನಾ ಮಸಾಲೆ ಮಾಡಲು ಬಳಸುವ ಬಿಳಿಗಡಲೆ ಹೆಚ್ಚು ಸೇವಿಸಿ. ಇದರಲ್ಲಿ ವಿಟಮಿನ್ ಬಿ6, ಜಿಂಕ್ ಹೇರಳವಾಗಿದ್ದು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ ಪರಿಹಾರ ನೀಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ