ಈ ಸಮಸ್ಯೆಗಳ ಪರಿಹಾರಕ್ಕೆ ದಿನ ದಿನವೂ ತಿನ್ನಿ ಪುದೀನಾ

ಸೋಮವಾರ, 6 ಫೆಬ್ರವರಿ 2017 (09:10 IST)
ಬೆಂಗಳೂರು: ಕರಿಬೇವು, ಕೊತ್ತಂಬರಿ ಸೊಪ್ಪಿನಂತೆ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಸೊಪ್ಪು ತರಕಾರಿ ಎಂದರೆ ಪುದೀನಾ ಸೊಪ್ಪು.  ಇದರಲ್ಲಿರುವ ಆರೋಗ್ಯಕರ ಅಂಶಗಳು ಹಲವಾರು.

 
ಇದು ಉತ್ತಮ ಜೀರ್ಣಕಾರಿ. ಅಸಿಡಿಟಿ ಸಮಸ್ಯೆ ಇರುವವರು ಪ್ರತಿ ದಿನ ಒಂದೆರಡು ಪುದೀನಾ ಎಲೆಗಳನ್ನು ಹಸಿಯಾಗಿ ಜಗಿಯುವುದು ಅಸಿಡಿಟಿಗೆ ಉತ್ತಮ ಪರಿಹಾರ. ಪುದೀನಾ ಸೊಪ್ಪಿನಿಂದಲೇ ಮಾಡಿದ ಹಲವು ಆಯುರ್ವೇದಿಕ್ ಗುಳಿಗೆಗಳೂ ಇವೆಯಲ್ಲಾ?

ಇನ್ನು ಹಲ್ಲು ನೋವಿನ ಸಮಸ್ಯೆ ಇರುವವರೂ ಹಸಿ ಪುದೀನಾ ಸೊಪ್ಪನ್ನು ಜಗಿಯಬಹುದು. ಇನ್ನೊಂದು ಪ್ರಮುಖ ಲಾಭವೆಂದರೆ ಬಿಕ್ಕಳಿಕೆಗೆ ಪರಿಹಾರ ನೀಡುವುದು. ನೀರು ಕುಡಿದರೂ, ಏನೇನು ಮಾಡಿದರೂ ಬಿಕ್ಕಳಿಕೆ ಬಂದು ಕಿರಿ ಕಿರಿಯಾಗುತ್ತಿದ್ದರೆ ಪುದೀನಾ ಸೊಪ್ಪು ಹಾಕಿದ ಟೀ ತಯಾರಿಸಿ ಕುಡಿಯಬಹುದು. ಇದೇ ರೀತಿ ಮಾಡುವುದರಿಂದ ಸಾಮಾನ್ಯ ಶೀತ, ಮೂಗು ಕಟ್ಟುವುದೂ ನಿಯಂತ್ರಣಕ್ಕೆ ಬರುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ