ಹಳದಿ ಹಲ್ಲು ಬಿಳಿ ಮಾಡಬೇಕಾದರೆ ಪಾಲಕ್ ಸೊಪ್ಪು ಚೆನ್ನಾಗಿ ತಿನ್ನಿ!

ಸೋಮವಾರ, 30 ಜನವರಿ 2017 (09:04 IST)
ಬೆಂಗಳೂರು:  ಪಾಲಕ್ ಸೊಪ್ಪು ಫ್ರೆಶ್ ಆಗಿದ್ದರೆ ಅದರ ಅಂದಕ್ಕೆ ಮರುಳಾಗಿಯಾದರೂ, ಕೊಳ್ಳದೇ ಇರುವುದಿಲ್ಲ. ಅಂತಹ ಹಚ್ಚ ಹಸಿರ ಸೊಪ್ಪು ತಿಂದು ಹಳದಿ ಹಲ್ಲು ಬಿಳಿ ಮಾಡಬಹುದಂತೆ! ಇನ್ನೂ ಏನೇನು ಆರೋಗ್ಯಕರ ಅಂಶಗಳು ಇದರಲ್ಲಿವೆ ನೋಡೋಣ.

 
ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಿರುತ್ತದೆ. ಅಲ್ಲದೆ ಇದರಲ್ಲಿ ಕೊಳೆ ತೆಗೆಯುವ ಗುಣವೂ ಇದೆ. ಇದರಿಂದಾಗಿ ಪಾಲಕ್ ಸೊಪ್ಪು ತಿನ್ನುವುದರಿಂದ ಹಲ್ಲು ಗಟ್ಟಿಯಾಗುವುದಷ್ಟೇ ಅಲ್ಲ, ಹಲ್ಲಿನ ಹಳದಿಗಟ್ಟುವಿಕೆ ತೆಗೆದು ಹೊಳೆಯುವಂತೆ ಮಾಡುತ್ತದೆ.

ಇಷ್ಟೇ ಅಲ್ಲ ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಚರ್ಮದ ಸುಕ್ಕುಗಟ್ಟುವಿಕೆಗೆ ಇದು ಉತ್ತಮ. ಯಾಕೆಂದರೆ ಇದು ಚರ್ಮದಲ್ಲಿರುವ ವಿಷಕಾರಿ ಅಂಶಗಳನ್ನು ಹೊರತೆಗೆದು ಚರ್ಮದ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೆ ಕೂದಲು ಸೊಂಪಾಗಿ ಬೆಳೆಯಬೇಕೆಂದರೆ ನಿಯಮಿತವಾಗಿ ಪಾಲಕ್ ಸೊಪ್ಪಿನ ಸೇವನೆ ಮಾಡಬಹುದು.

ಪಾಲಕ್ ಸೊಪ್ಪಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ದೂರ ಮಾಡುತ್ತದೆ.  ಇಂತಹ ಸಮಸ್ಯೆಗೆ  ಪ್ರತಿ ನಿತ್ಯ ಪಾಲಕ್ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು. ಅಲ್ಲದೆ, ಪಾಲಕ್ ಸೊಪ್ಪಿನಲ್ಲಿ ವಿಟಮಿನ್, ಆಂಟಿ ಆಕ್ಸಿಡೆಂಟ್, ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಹೇರಳವಾಗಿದ್ದು, ಹೃದಯದ ಆರೋಗ್ಯ ಕಾಪಾಡುತ್ತದೆ.

ಇಷ್ಟೇ ಅಲ್ಲದೆ ವೀರ್ಯಾಣುಗಳ ಸಂಖ್ಯೆ ಅಭಿವೃದ್ಧಿಗೆ, ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಾಗಿ ಪಾಲಕ್ ಸೊಪ್ಪಿನ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ