ಬೆಂಗಳೂರು : ತೂಕ ಹೆಚ್ಚಿಸಿಕೊಳ್ಳಲು ಕೆಲವರು ಅತಿಯಾಗಿ ತಿನ್ನುತ್ತಾರೆ. ಆದರೆ ಅವರ ತೂಕ ಹೆಚ್ಚಳವಾಗುವುದಿಲ್ಲ. ಯಾಕೆಂದರೆ ತೂಕ ಹೆಚ್ಚಾಗಬೇಕೆಂದರೆ ಅತಿಯಾಗಿ ತಿಂದರೆ ಸಾಲದು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ಹಾಗಾಗಿ ತೂಕ ಹೆಚ್ಚಾಗಲು ಪ್ರತಿದಿನ ಇವುಗಳನ್ನು ಸೇವಿಸಿ.
ತೂಕ ಹೆಚ್ಚಾಗಲು ಹೆಚ್ಚಿನ ಪ್ರೋಟೀನ್ ಆಹಾರ ಮತ್ತು ಸಾಕಷ್ಟು ಬಾಳೆಹಣ್ಣುಗಳನ್ನು ತಿನ್ನಬೇಕು. ಹಾಗೇ ಹಾಲು ಬಾಳೆಹಣ್ಣು ಅಥವಾ ಬಾಳೆಹಣ್ಣು , ಮೊಸರನ್ನು ಪ್ರತಿದಿನ ಸೇವಿಸಬೇಕು. ಹಾಗೇ ಮಾವಿನ ಹಣ್ಣು, ಅಶ್ವಗಂಧ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. ಬೆಳಿಗ್ಗೆ 5 ಖರ್ಜೂರವನ್ನು ತಿನ್ನಿ. ಮಜ್ಜಿಗೆ ಮತ್ತು ಸೋಯಾಬೀನ್ ಸೇವಿಸಿ.