ಬೆಂಗಳೂರು : ಸುಂದರವಾದ, ಗಟ್ಟಿಯಾದ ಕೂದಲನ್ನು ಹೊಂದಲು ಎಲ್ಲರೂ ಬಯಸುತ್ತಾರೆ. ಆದರೆ ತಲೆಹೊಟ್ಟಿನ ಸಮಸ್ಯೆಯಿಂದ ಕೂದಲು ಉದುರಿ ಹೋಗುತ್ತದೆ. ಅದಕ್ಕಾಗಿ ಶಾಂಪುಗಳನ್ನು ಬಳಸುವ ಬದಲು ಈ ಆಹಾರಗಳನ್ನು ಸೇವಿಸಿ.
*ಅಸಮರ್ಪಕ ಜೀರ್ಣ ಕ್ರಿಯೆಯಿಂದ ಕೆಲವರು ತಲೆಹೊಟ್ಟಿನ ಸಮಸ್ಯೆಗೆ ಗುರಿಯಾಗುತ್ತಾರೆ ಅಂತವರು ಶುಂಠಿಯನ್ನು ಸೇವಿಸಿ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರಗಳ ನಾಶಕಾರಿ ಗುಣಗಳನ್ನು ಹೊಂದಿರುವುದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ನಿಮ್ಮನ್ನ ದೂರವಿಡುತ್ತದೆ.
*ಸೂರ್ಯಕಾಂತಿ ಬೀಜದಲ್ಲಿ ಸತು ಮತ್ತು ವಿಟಮಿನ್ ಬಿ6 ಸಮೃದ್ಧವಾಗಿರುವುದರಿಂದ ಇದು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೇ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಹೀಗಾಗಿ ಅಜೀರ್ಣದಿಂದ ಉಂಟಾಗುವ ತಲೆಹೊಟ್ಟು ಕಡಿಮೆಯಾಗುತ್ತದೆ.