ಥೈರಾಯ್ಡ್ ಸಮಸ್ಯೆ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ

ಶುಕ್ರವಾರ, 17 ಸೆಪ್ಟಂಬರ್ 2021 (11:54 IST)
ಥೈರಾಯ್ಡ್ ರೋಗಲಕ್ಷಣಗಳನ್ನು ನಿರ್ವಹಿಸಲು ಆಹಾರವು ಸಹಾಯ ಮಾಡುತ್ತದೆ. ಪೌಷ್ಟಿಕ ಮತ್ತು ಸಮತೋಲಿತ ಆಹಾರದೊಂದಿಗೆ ಔಷಧಿಗಳನ್ನು ಸೇವಿಸುವ ಮೂಲಕ ರೋಗಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು

ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು, ಆಹಾರ ಪದ್ಧತಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಆರೋಗ್ಯ ಸುಧಾರಣೆಯಲ್ಲಿ ಸಮಸ್ಯೆ ಉಂಟು ಮಾಡಬಹುದು. ಥೈರಾಯ್ಡ್ ನಮ್ಮ ಗಂಟಲಿನಲ್ಲಿ ಕಂಡು ಬರುವ ಒಂದು ಗ್ರಂಥಿಯಾಗಿದೆ. ಇದರ ಕೆಲವು ಸಮಸ್ಯೆಗಳಿಂದಾಗಿ ಆಯಾಸ, ಶೀತ, ತೂಕ ಹೆಚ್ಚಾಗುವುದು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳು ಆರಂಭವಾಗುತ್ತದೆ. ಥೈರಾಯ್ಡ್ನಲ್ಲಿ ಎರಡು ವಿಧಗಳಿವೆ. ಹೈಪೋಥೈರಾಯ್ಡಿಸಂ ಮತ್ತು ಹೈಪರ್ ಥೈರಾಯ್ಡಿಸಮ್. ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರುವ ಮೂಲಕ ಈ ಸಮಸ್ಯೆ ಕಾಡತೊಡಗುತ್ತದೆ.
ಥೈರಾಯ್ಡ್ ರೋಗಲಕ್ಷಣಗಳನ್ನು ನಿರ್ವಹಿಸಲು ಆಹಾರವು ಸಹಾಯ ಮಾಡುತ್ತದೆ. ಪೌಷ್ಟಿಕ ಮತ್ತು ಸಮತೋಲಿತ ಆಹಾರದೊಂದಿಗೆ ಔಷಧಿಗಳನ್ನು ಸೇವಿಸುವ ಮೂಲಕ ರೋಗಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಅಯೋಡಿನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ವಸ್ತುಗಳನ್ನು ಸೇವಿಸುವುದರಿಂದ ಅದರ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಥೈರಾಯ್ಡ್ ರೋಗ ಲಕ್ಷಣಗಳನ್ನು ಕಡಿಮೆ ಮಾಡುವಂತಹ ಹಣ್ಣುಗಳು ಬಗ್ಗೆ ನಾವು ತಿಳಿದುಕೊಳ್ಳೋಣ.
ಸೇಬು ಹಣ್ಣು

ಸೇಬು ಹಣ್ಣು ಆರೋಗ್ಯಕರ ಆಹಾರಗಳಲ್ಲಿ ಒಖಂದಾಗಿದೆ. ಪ್ರತಿನಿತ್ಯ ಒಂದು ಸೇಬು ಹಣ್ಣು ಸೇವನೆಯಿಂದ ದೇಹದ ತೂಕವನ್ನು ನಿಯಂತ್ರಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಥೈರಾಯ್ಡ್ ಗ್ರಂಥಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ಖಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆರ್ರಿ ಹಣ್ಣು
Photo Courtesy: Google

ಬೆರ್ರಿ ಹಣ್ಣುಗಳು ಅಂದರೆ ಆಯಂಟಿ ಆಯಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಇದು ಥೈರಾಯ್ಡ್ಗೆ ಪ್ರಯೋಜನಕಾರಿ. ಬೆರ್ರಿ ಹಣ್ಣುಗಳಲ್ಲಿ ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುತ್ತದೆ. ಥೈರಾಯ್ಡ್ ಸಮಸ್ಯೆ ಇದ್ದಾಗ ಮಧುಮೇಹ ಮತ್ತು ತೂಕ ಹೆಚ್ಚಳದಂತಹ ಲಕ್ಷಣಗಳು ಕಂಡು ಬರುವುದು ಸಹಜ. ಹಾಗಿರುವಾಗ ನಿಮ್ಮ ಆಹಾರದಲ್ಲಿ ಸ್ಟ್ರಾಬೆರಿ, ಬೆರ್ರಿ ಹಣ್ಣುಗಳನ್ನು ಸೇವಿಸಿ.
ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ಆಯಂಟಿ-ಆಯಕ್ಸಿಡೆಂಟ್ಗಳು ಸಮೃದ್ಧವಾಗಿರುವುದರಿಂದ ಇದು ಫ್ರೀ ರಾಡಿಕಲ್ಸ್ಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ಅನಾನಸ್

ಅನಾನಸ್ನಲ್ಲಿ ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿರುತ್ತದೆ. ಈ ಎರಡೂ ಪೋಷಕಾಂಶಗಳು ದೇಹವನ್ನು ಸ್ವತಂತ್ರ ರಾಡಿಕಲ್ಸ್ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ ಸಮೃದ್ಧವಾಗಿದ್ದು, ನಿಮ್ಮ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅನಾನಸ್ ಹಣ್ಣು ಕ್ಯಾನ್ಸರ್, ಗಡ್ಡೆ ಮತ್ತು ಮಲಬದ್ಧತೆ ರೋಗಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕಾರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ