24 ಗಂಟೆಯಲ್ಲಿ 0,570 ಮಂದಿಗೆ ಕೊರೋನಾ, 431 ಬಲಿ..!

ಗುರುವಾರ, 16 ಸೆಪ್ಟಂಬರ್ 2021 (12:55 IST)
ನವದೆಹಲಿ,ಸೆ.16 : ಮತ್ತೆ ಸೋಂಕಿನ ಪ್ರಮಾಣದಲ್ಲಿ ಅಲ್ಪ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 30,570 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, 431 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲೂ ಭಾರಿ ಏರಿಕೆಯಾಗಿರುವುದರಿಂದ ಇದುವರೆಗೂ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 4.43 ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.97.64ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 3,42,923 ಲಕ್ಷಕ್ಕೆ ಸೀಮಿತಗೊಂಡಿದೆ.ಇದುವರೆಗೂ ದೇಶದ್ಯಾಂತ 76.57 ಕೋಟಿ ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಹೀಗಾಗಿ 3.33 ಕೋಟಿ ಸೋಂಕಿತರ ಪೈಕಿ ಈಗಾಗಲೆ 3.25 ಕೋಟಿ ಮಂದಿ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ.
ಲಸಿಕೆ ಹಾಕುವುದರ ಜತೆಗೆ ದೇಶದಲ್ಲಿ ಪ್ರತಿನಿತ್ಯ ಕೊರೊನಾ ತಪಾಸಣೆ ಹೆಚ್ಚಳ ಮಾಡಲಾಗುತ್ತಿದೆ. ನಿನ್ನೆ ಒಂದೇ ದಿನ 15 ಲಕ್ಷಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ದೇಶದ 54 ಕೋಟಿಗೂ ಹೆಚ್ಚು ಮಂದಿಯ ತಪಾಸಣೆ ನಡೆಸಿದಂತಾಗಿದೆ ಎಂದು ಸಚಿವಾಲಯ ವಿವರಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ