ಸೋಯಾಬಿನ್ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯಕರ

ಶುಕ್ರವಾರ, 31 ಡಿಸೆಂಬರ್ 2021 (09:16 IST)
ಸೋಯಾ ಬೀನ್ ಕೂಡ ಒಂದಾಗಿದ್ದು, ಮಕ್ಕಳಿಗೆ-ವೃದ್ಧರಿಗೆ ಎಲ್ಲರಿಗೂ ಸೋಯಾಬಿನ್ ನಿಂದ ಮಾಡುವ ಅಡುಗೆ  ಅಚ್ಚುಮೆಚ್ಚು ಆಗಿದ್ದು ಇದರಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳು ಅಡಗಿವೆ.
 
ಮಧುಮೇಹ

ಸೋಯಾಬೀನ್ನಲ್ಲಿ ಐಸೋಫ್ಲೇವಾನ್ಸ್ ಎನ್ನುವ ಜೈವಿಕ ಸಕ್ರಿಯ ಸಂಯುಕ್ತಗಳು ಅಧಿಕ ಪ್ರಮಾಣದಲ್ಲಿದೆ. ಆ ಸಂಯುಕ್ತಗಳು ಮಧುಮೇಹ ಮತ್ತು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಸೋಯಾಬೀನ್ ಉತ್ಪನ್ನಗಳನ್ನು ತಿನ್ನವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ ಮತ್ತು ಮಧುಮೇಹಿಗಳಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸಬಹುದು.

ಕೂದಲಿನ ಆರೋಗ್ಯ

ಸೋಯಾಬೀನ್ ಕೂದಲಿಗೆ ಚಿಕಿತ್ಸಕವಾಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಕೂದಲು ಉದುರುವಿಕೆ, ಕೂದಲು ಒಣಗುವುದು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು. ಸೋಯಾಬೀನ್ ಕೂದಲಿನ ವಿನ್ಯಾಸವನ್ನು ಉತ್ತಮಪಡಿಸುವುದು ಮತ್ತು ಸ್ಥಿತಿಸ್ಥಾಪಕವನ್ನು ಒದಗಿಸುವುದು.

ರೋಗ ನಿರೋಧಕ ಶಕ್ತಿ

ಸೋಯಾದಲ್ಲಿರುವ ಪೆಪ್ಟೈಡ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುವಂತೆ ಶಕ್ತಿ ನೀಡುತ್ತದೆ. ಇನ್ನಿತರ ಪದಾರ್ಥಗಳಲ್ಲಿ ಲಭ್ಯವಿರದ ವಿಟಮಿನ್ ಮತ್ತು ಖನಿಜಾಂಶಗಳನ್ನೂ ಸೋಯಾ ಸೇವನೆಯಿಂದ ಪಡೆಯಬಹುದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಿಸಿ ಶುದ್ದೀಕರಣಗೊಳಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದವರಿಗೂ ಸೋಯಾ ಹೆಚ್ಚು ಪರಿಣಾಮಕಾರಿ

ಚರ್ಮದ ಆರೋಗ್ಯ ರಕ್ಷಣೆ

ಸೋಯಾಬೀನ್ ನ ಪೇಸ್ಟ್ ನ್ನು ಹಚ್ಚಿಕೊಂಡರೆ ಆಗ ಇದರಿಂದ ಚರ್ಮಕ್ಕೆ ಮೊಶ್ಚಿರೈಸ್ ಸಿಗುವುದು ಮತ್ತು ಚರ್ಮವು ನಯವಾಗುವುದು. ಚರ್ಮದಲ್ಲಿ ಇರುವಂತಹ ಹೆಚ್ಚುವರಿ ಎಣ್ಣೆಯಂಶವನ್ನು ಹೊರಗೆ ಹಾಕಬೇಕಿದ್ದರೆ ಆಗ ನೀವು ಸೋಯಾಬೀನ್ ಬಳಕೆ ಮಾಡಿ.

ಜ್ಞಾಪಕ ಶಕ್ತಿ ಹೆಚ್ಚಳ

ಸೋಯಾದಲ್ಲಿರುವ ಲೆಸಿತಿನ್ ಅಂಶ ಜ್ಞಾಪಕ ಶಕ್ತಿಯನ್ನು ಅಧಿಕಗೊಳಿಸಿ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ. ಸೋಯಾ ದೇಹಕ್ಕೆ, ಮೆದುಳಿಗೆ ಎಲ್ಲ ರೀತಿಯಿಂದಲೂ ಅನೇಕ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ಮಿತವಾಗಿ ಸೋಯಾ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಕೊಲೆಸ್ಟ್ರಾಲ್

ಸೋಯಾದಲ್ಲಿ ವಿಶೇಷವಾದ ಐಸೊಫ್ಲೇವಾನ್ಸ್ ಆಂಟಿಯಾಕ್ಸಿಡಂಟ್ ಜೀವಕಣಗಳನ್ನು ಸಂರಕ್ಷಿಸುವುದಲ್ಲದೆ ವಯಸ್ಸಿಗೆ ಮುನ್ನವೇ ಸುಕ್ಕು ಮೂಡುವುದನ್ನು ತಡೆಯುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲನ್ನೂ ಕರಗಿಸುತ್ತದೆ.

ತೂಕ ಇಳಿಕೆ
ಸೋಯಾಬೀನ್ನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ತೂಕ ಇಳಿಕೆಗೆ ಪ್ರಮುಖವಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು. ಅಲ್ಲದೆ ಈ ಬೀನ್ ತಿನ್ನುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ. ಇದರಿಂದ ತೂಕ ಇಳಿಕೆಯಲ್ಲಿ ಸಹಕಾರಿ.

 
ಕ್ಯಾನ್ಸರ್

ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಈ ರೀತಿಯ ಆರೋಗ್ಯಕರ ಆಹಾರಗಳು ತುಂಬಾ ಸಹಕಾರಿಯಾಗಿವೆ. ಅಗ್ರಿಕಲ್ಚರ್ ಅಂಡ್ ಫುಡ್ ಕೆಮಿಸ್ಟ್ರಿ ಎಂಬ ಜರ್ನಲ್ ಸೋಯಾಬೀನ್ನಲ್ಲಿ ಜೆನಿಸ್ಟೈನ್ ಆ್ಯಂಟಿಆಕ್ಸಿಡೆಂಟ್ ಅಂಶವಿರುವುದರಿಂದ ಸ್ತನ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ