ಮೊಟ್ಟೆ ಶ್ಯಾವಿಗೆ ಬಾತ್ ಹೀಗೆ ಮಾಡಿ ನೋಡಿ

ಶನಿವಾರ, 27 ಜೂನ್ 2020 (08:27 IST)
Normal 0 false false false EN-US X-NONE X-NONE

ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ಉತ್ತಮ. ಅದರಿಂದ ಹಲವು ಬಗೆಯ ಆಹಾರಗಳನ್ನು ತಯಾರಿಸಬಹುದು. ಅದೇರೀತಿ ಮೊಟ್ಟೆ ಬಳಸಿ ರುಚಿಕರವಾದ ಶ್ಯಾವಿಗೆ ಬಾತ್ ಕೂಡ ತಯಾರಿಸಬಹುದು.
 

ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 2, ಶ್ಯಾವಿಗೆ 500 ಗ್ರಾಂ, ಈರುಳ್ಳಿ 2, ದನಿಯಾ 1 ಚಮಚ, ಜೀರಿಗೆ 1 ಚಮಚ, ಕೆಂಪು ಮೆಣಸಿನ ಕಾಯಿ 2, ದಾಲ್ಚಿನ್ನಿ 1, ಏಲಕ್ಕಿ 2, ಎಣ್ಣೆ ಅಥವಾ ತುಪ್ಪ, ನೀರು 1 ಕಪ್, ಸಾಸಿವೆ 1 ಚಮಚ, ಕಡಲೇಬೇಳೆ 2 ಚಮಚ, ಕರಿಬೇವು, ಬೆಣ್ಣೆ 3 ಚಮಚ, ಉಪ್ಪು.

ಮಾಡುವ ವಿಧಾನ : ದನಿಯಾ , ಜೀರಿಗೆ, ಕೆಂಪು ಮೆಣಸಿನ ಕಾಯಿ, ದಾಲ್ಚಿನ್ನಿ ಇವಿಷ್ಟನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ಬಳಿಕ ಶ್ಯಾವಿಗೆಯನ್ನು ಎಣ್ಣೆ ಅಥವಾ ತುಪ್ಪದಲ್ಲಿ  ಹುರಿದುಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ಸಾಸಿವೆ, ಕಡಲೇಬೆಳೆ, ಕರಿಬೇವು, ಮೊಟ್ಟೆಯ ಹಳದಿ ಭಾಗ ಹಾಗೂ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ನೀರು ಹಾಕಿ ಕುದಿಸಿ ನಂತರ ಶ್ಯಾವಿಗೆ ಹಾಕಿ ನೀರು ಆವಿಯಾಗುವವರೆಗೂ ಬೇಯಿಸಿ. ಆಗ ಮೊಟ್ಟೆ ಶಾವಿಗೆ ಬಾತ್ ರೆಡಿಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ