ಸೈಕ್ಲೋನ್ ನಿಂದ ಆರೋಗ್ಯ ಏರು ಪೇರು. ಬೆಚ್ಚಗಿಡಲು ಇಲ್ಲಿದೆ ಉಪಾಯ

ಬುಧವಾರ, 14 ಡಿಸೆಂಬರ್ 2016 (12:47 IST)
ಬೆಂಗಳೂರು: ವಾರ್ಧಾ ಚಂಡಮಾರುತದ ಇಫೆಕ್ಟ್ ಒಂದೆಡೆ. ಇನ್ನೊಂದೆಡೆ ಚಳಿಗಾಲದ ಚಳಿ. ಅಂತೂ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ಶೀತ ಕೆಮ್ಮು ಜ್ವರ ಈಗ ಸಾಮಾನ್ಯವಾಗಿದೆ. ಹಾಗಾಗಿ ಆದಷ್ಟು ಬೆಚ್ಚಗಿರುವುದೇ ಪರಿಹಾರ.

·         ಅನವಶ್ಯಕವಾಗಿ ಮನೆಯಿಂದ ಹೊರ ಕಾಲಿಡಬೇಡಿ.
·         ಶೀತ ಅಥವಾ ಜ್ವರವಿದ್ದರೆ ಬಿಸಿ ಹಾಲಿಗೆ ಒಂದು ಚಿಟಿಕಿ ಅರಶಿನ ಹಾಕಿ ಸೇವಿಸಿ.
·         ಸೀನು ಶುರವಾದ ತಕ್ಷಣ ತುಳಸಿ ಎಲೆಯನ್ನು ಆಗಾಗ ಮೂಸಿಕೊಳ್ಳುತ್ತಿದ್ದರೆ ಶೀತ ನಿಯಂತ್ರಣದಲ್ಲಿರುತ್ತದೆ
·         ಕೆಮ್ಮು ಇದ್ದವರು ಕಾಳು ಮೆಣಸು ಮತ್ತು ಬೆಲ್ಲದ ಪುಡಿಯನ್ನು ಸೇವಿಸುವುದು ಉತ್ತಮ.
·         ಜ್ವರವಿದ್ದರೆ ಆಗಾಗ ಬಿಸಿನೀರಿನ ಸೇವನೆ ಮಾಡಬೇಕು.
·         ಆದಷ್ಟು ದ್ರವಾಹಾರ ಸೇವಿಸುತ್ತಿದ್ದರೆ, ದೇಹಾಯಾಸವಾಗುವುದರಿಂದ ತಪ್ಪಿಸಿಕೊಳ್ಳಬಹುದು.
·         ತೀವ್ರ ಗಂಟಲು ಕೆರೆತವಿದ್ದರೆ ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಶುಂಠಿ ರಸ ಸೇರಿಸಿ ಸೇವಿಸಬಹುದು.
ಇನ್ನು ಕಚೇರಿ, ಮತ್ತಿತರ ಕೆಲಸಗಳಿಗೆ ಅನಿವಾರ್ಯವಾಗಿ ಹೋಗಲೇಬೇಕಾದರೆ, ಸ್ಕಾರ್ಫ್, ಸ್ವೆಟರ್ ಜತೆಯಲ್ಲಿರಲಿ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲವಲ್ಲಾ? ಆದಷ್ಟು ಬೆಚ್ಚಗಿರುವುದೇ ಎಲ್ಲರಿಗೂ ಸರಿಯಾದ ಉಪಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ