ಕೈ ಮತ್ತು ಪಾತ್ರೆಯಿಂದ ಬರುವ ತರಕಾರಿ ವಾಸನೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಶನಿವಾರ, 20 ಮಾರ್ಚ್ 2021 (06:46 IST)
ಬೆಂಗಳೂರು : ಅಡುಗೆ ಮಾಡಲು ತರಕಾರಿ ಕತ್ತರಿಸುತ್ತೇವೆ. ಆಗ ನಮ್ಮ ಕೈಗಳಿಂದ ತರಕಾರಿಯ ವಾಸನೆ ಹೊರಹೊಮ್ಮುತ್ತಿರುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಈ ವಾಸನೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಈ ವಾಸನೆ ಕೈಗಳಲ್ಲಿ ಮಾತ್ರವಲ್ಲ ಕೆಲವೊಮ್ಮೆ ಪಾತ್ರೆಗಳಿಂದ ಕೂಡ ಬರುತ್ತದೆ. ಇದನ್ನು ನಿವಾರಿಸಲು ಅಡುಗೆಸೋಡಾ ಮತ್ತು ವಿನೆಗರ್ ನ್ನು ಮಿಶ್ರಣ ಮಾಡಿ ಅದರಿಂದ ಮಡಿಕೆಯನ್ನು ಸ್ವಚ್ಛಗೊಳಿಸಿ ಮತ್ತು ಕೈಗಳನ್ನು ವಾಶ್ ಮಾಡಿ. ಅಲ್ಲದೇ ತರಕಾರಿ ಕತ್ತರಿಸುವ ಬೋರ್ಡ್, ಚಾಕುಗಳನ್ನು ಕೂಡ ವಾಶ್ ಮಾಡಿ. ಇದರಿಂದ ವಾಸನೆ ನಿವಾರಣೆಯಾಗುವುದು.

ಅಲ್ಲದೇ ನಿಂಬೆ ರಸದಿಂದ ಈ ವಾಸನೆಯನ್ನು ಹೋಗಲಾಡಿಸಬಹುದು. ಹಾಗಾಗಿ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ ಅದರಿಂದ ಕೈಗಳನ್ನು ವಾಶ್ ಮಾಡಿದರೆ ವಾಸನೆ ಹೋಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ