ಬೇಗನೇ ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಬುಧವಾರ, 26 ಸೆಪ್ಟಂಬರ್ 2018 (14:05 IST)
ಬೆಂಗಳೂರು : ದಪ್ಪವಿರುವವರು ತೂಕ ಇಳಿಸಿಕೊಳ್ಳಲು ಅನೇಕ ಸರ್ಕಸ್ ಗಳನ್ನು ಮಾಡುತ್ತಾರೆ. ಆದರೆ ಅವರು ಅಷ್ಟೇ ಕಷ್ಟ ಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲಿ. ಅಂತವರು ಈ ಸೂತ್ರಗಳನ್ನು ಫಾಲೋ ಮಾಡಿದರೆ ಶೀಘ್ರದಲ್ಲಿಯೇ ತೂಕ ಇಳಿಸಿಕೊಳ್ಳಬಹುದು.


*ನೀರಿನ ಡಯಟ್: ನೀರು ಕುಡಿಯುವುದನ್ನು ಹೆಚ್ಚು ರೂಢಿಸಿಕೊಳ್ಳಿ. ಇದು ದೇಹವನ್ನು ಶುದ್ಧಗೊಳಿಸುವುದರೊಂದಿಗೆ ದೇಹದಲ್ಲಿ ಅಲ್ಲಲ್ಲಿ ಸೇರಿಕೊಂಡ ಬೊಜ್ಜನ್ನೂ ಕಿತ್ತೊಗೆಯುತ್ತದೆ. ಹೊಟ್ಟೆ ಸುತ್ತ ತುಂಬಿಕೊಂಡ ಬೊಜ್ಜನ್ನೂ ನಿವಾರಿಸುತ್ತದೆ


*ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ ಡಯಟ್ ಮಾಡುತ್ತಿದ್ದೀರ ಎಂದರೆ ಸಂಪೂರ್ಣ ಊಟ ಬಿಟ್ಟು ಕೂರಬೇಕೆಂದೇನಿಲ್ಲ. ದೇಹಕ್ಕೆ ಅವಶ್ಯಕವಾದ ಪೋಷಕಾಂಶವನ್ನು ನೀಡಲೇಬೇಕು. ದಿನದಲ್ಲಿ ಒಂದು ಗ್ಲಾಸ್ ಹಾಲು, ಧಾನ್ಯಗಳು, ಮೊಟ್ಟೆ ಮತ್ತು ಫೈಬರ್ ಇರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ.


*ಹಸಿವಾದಾಗಲೆಲ್ಲಾ ಗ್ರೀನ್ ಟೀ ಅಥವಾ ತರಕಾರಿ ತಿನ್ನಿ. ನೀವು ಊಟದ ಪ್ರಮಾಣದಲ್ಲಿ ಕಡಿಮೆ ಮಾಡುವುದರಿಂದ ಹಸಿವಾಗುವುದು ಸಹಜ. ಆ ಸಮಯದಲ್ಲಿ ತರಕಾರಿ ಸಲಾಡ್ ಅಥವಾ ಗ್ರೀನ್ ಟೀ ಕುಡಿಯಬೇಕು. ಇದು ಬೊಜ್ಜನ್ನು ಕರಗಿಸುವುದರೊಂದಿಗೆ ಚರ್ಮವನ್ನೂ ಸುಂದರವಾಗಿಸುತ್ತದೆ.


*ಗ್ಯಾಸ್ ಉಂಟು ಮಾಡುವ ಆಹಾರ ತ್ಯಜಿಸಿ ಆಲೂಗಡ್ಡೆ, ಹೂಕೋಸು, ಎಲೆಕೋಸು, ಮದ್ಯ, ಜೋಳ, ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವ ಇಂತಹ ತರಕಾರಿ ಸೇವನೆಯನ್ನು ತ್ಯಜಿಸಬೇಕು. ಇದರ ಸೇವನೆಯಿಂದ ಹೊಟ್ಟೆ ಊದಿಕೊಂಡಂತಾಗುತ್ತದೆ.


*ನಿರ್ದಿಷ್ಟ ಸಮಯ ಪಾಲಿಸಿ ಊಟವನ್ನು ನಿಗದಿತ ಸಮಯಕ್ಕೇ ಮಾಡಿಮುಗಿಸಲು ಪ್ರಯತ್ನಿಸಿ. ಹೊತ್ತಿಲ್ಲದ ಹೊತ್ತಿನಲ್ಲಿ ತಿಂಡಿ, ಊಟ ಬೇಡ. ಇಲ್ಲದಿದ್ದರೆ ಜೀರ್ಣಕ್ರಿಯೆ ವ್ಯತ್ಯಾಸಗೊಂಡು ದೇಹದಲ್ಲಿ ಅನಗತ್ಯ ಬೊಜ್ಜು ತುಂಬಿಕೊಳ್ಳುವಂತೆ ಮಾಡುತ್ತದೆ.


*ನಡಿಗೆ, ಜಾಗಿಂಗ್, ವ್ಯಾಯಾಮ.... ಈ ಎಲ್ಲ ಟಿಪ್ಸ್ ಗಳನ್ನು ಅನುಸರಿಸುವುದರಿಂದ ಮತ್ತು ಇದರೊಂದಿಗೆ ನಡಿಗೆ, ಜಾಗಿಂಗ್, ಮನೆಕೆಲಸಗಳು, ವ್ಯಾಯಾಮ ಇಂತಹ ಸುಲಭ ವ್ಯಾಯಾಮಗಳೂ ನಿಮ್ಮ ತೂಕ ಕಡಿಮೆಯಾಗಲು ಸಹಕಾರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ