ತಲೆನೋವಿಗೆ ಈ 4 ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

ಗುರುವಾರ, 12 ಜುಲೈ 2018 (17:07 IST)
ತಲೆ ನೋವು ಬರಲು ಕಾರಣ ಒಂದಾ ಎರಡಾ? ಒತ್ತಡ, ಕಂಪ್ಯೂಟರ್ ‌ಮುಂದೆ ಕುಳಿತು ತಾಸುಗಟ್ಟಲೆ ಮಾಡುವ ಕೆಲಸ, ನಿದ್ದೆಯ ಕೊರತೆ, ಆಹಾರ ಸೇವಿಸುವ ಸಮಯದಲ್ಲಿ ಏರುಪೇರು, ಇಡಿಯ ದಿನ ಫೋನ್ ನಲ್ಲಿ ಮುಳುಗಿರುವುದು ಹೀಗೆ ಹಲವಾರು ಕಾರಣಕ್ಕೆ ತಲೆ ನೋವು ಬಂದುಬಿಡುತ್ತೆ. ಈ ರೀತಿಯ ನೋವುಗಳಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ - 
1. ನೀಲಗಿರಿ ಎಣ್ಣೆ
 
ನೀಲಗಿರಿ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮುಂತಾದ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ. ನೀಲಗಿರಿ ಎಣ್ಣೆಯನ್ನು ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡಿದರೆ ಅಥವಾ ನೋವು ಹೆಚ್ಚಿರುವ ಜಾಗಕ್ಕೆ ಹೆಚ್ಚು ಒತ್ತಡ ಹಾಕಿ ಮಸಾಜ್ ಮಾಡಿದರೆ ನೋವು ಬೇಗ ಮಾಯವಾಗುತ್ತದೆ. ಅಥವಾ ಹಾಂಡ್‌ಕರ್ಚಿಎಫ್‌ಗೆ 2-3 ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ತಲೆ ನೋವು ಆದಾಗಲೆಲ್ಲಾ ಇನ್ಹೇಲ್ ಮಾಡಿ.
 
2. ಲವಂಗ
 
ಇನ್ನೊಂದು ಬಹುಪಯೋಗಿ ಮನೆಮದ್ದು ಎಂದರೆ ಅದು ಲವಂಗ. ಲವಂಗ ಅದರ ಕೂಲಿಂಗ್ ಸ್ವಭಾವದಿಂದ ತಲೆನೋವು ನಿವಾರಿಸುತ್ತದೆ. ಕೆಲವು ಲವಂಗವನ್ನು ಪುಡಿಮಾಡಿ ಸ್ವಚ್ಛವಾದ ಹಾಂಡ್‌ಕರ್ಚಿಎಫ್‌ಗೆ ಹಾಕಿ ಅದನ್ನು ಇನ್ಹೇಲ್ ಮಾಡಿ.
 
3. ಶುಂಠಿ
 
ತಲೆನೋವು ತಡೆಯಲು ಶುಂಠಿಯನ್ನು ಸೇವಿಸಿ. ಇದು ರಕ್ತನಾಳಗಳ ಉರಿಯೂತವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಪರಿಹಾರವನ್ನು ಒದಗಿಸುತ್ತದೆ. ಶುಂಠಿ ರಸ ಮತ್ತು ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ರತಿದಿನ ಸೇವಿಸಿ. ಶುಂಠಿ ಪುಡಿ ಅಥವಾ ಶುಂಠಿಯನ್ನು ನೀರಿನಲ್ಲಿ ಹಾಕಿ ಕುದಿಸಿ, ಆವಿಯನ್ನು ಇನ್ಹೇಲ್ ಮಾಡಿ.
 
4. ಮಸಾಲಾ ಚಹಾ
 
ತಲೆ ನೋವು ಕಾಣಿಸಿಕೊಂಡ ತಕ್ಷಣ ಮಸಾಲಾ ಟೀ ಸೇವಿಸಿ, ಇದು ನಿಮಗೆ ರಿಲ್ಯಾಕ್ಸ್ ಮಾಡುತ್ತದೆ ಮತ್ತು ತಲೆ ನೋವು, ಕಟ್ಟಿದ ಮೂಗಿನ ಸಮಸ್ಯಯಿದ್ದರೆ ಬೇಗನೆ ಕಡಿಮೆ ಮಾಡುತ್ತದೆ. ಇದು ಮೆದುಳಿನ ನರವನ್ನು ಚುರುಕುಗೊಳಿಸಿ ನೋವನ್ನು ಹೋಗಲಾಡಿಸುತ್ತದೆ. ನಿತ್ಯ ಕುಡಿಯುವ ಟೀಗೆ ಸ್ವಲ್ಪ ಶುಂಠಿ, ಲವಂಗ ಮತ್ತು ಏಲಕ್ಕಿ ಹಾಕಿ ಕುದಿಸಿ ಕುಡಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ