ಆರೋಗ್ಯಕರ ಸೌತೆಕಾಯಿಯ ಉಪಯೋಗಗಳು

ಗುರುವಾರ, 12 ಜುಲೈ 2018 (14:49 IST)
ಬೇಸಿಗೆಯಲ್ಲಿ ಹೆಚ್ಚಾಗಿ ಸೌತೆಕಾಯಿಯನ್ನು ಸೇವಿಸುವುದನ್ನು ನಾವು ಕಾಣಬಹುದು. ಇದರಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ದೇಹದ ದಾಹವನ್ನು ತಣಿಸಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗಿದೆ. ಸೌತೆಕಾಯಿಯಲ್ಲಿ 95% ನೀರು ಮತ್ತು 5% ನಾರಿನಂಶವನ್ನು ಹೊಂದಿರುವುದರಿಂದ ಇದು ದೇಹವನ್ನು ಕ್ಲೆನ್ಸ್ ಮಾಡುತ್ತದೆ.
- ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.
 
- ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲಿಶು ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ದೇಹಕ್ಕೆ ತಂಪು, ಉರಿಯು ಕಡಿಮೆಯಾಗುತ್ತದೆ.
 
- ಚರ್ಮದ ಉರಿ ಹಾಗು ಸನ್‌ಬರ್ನ್ಸಗಳಿಗೆ ಸೌತೆಕಾಯಿ ರಸ ತುಂಬ ಪ್ರಯೋಜನಕಾರಿ.
 
- ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನಕೂಲಕರ. 
 
- ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.
 
- ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ.
 
- ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.
 
- ಸೌತೆಕಾಯಿಯನ್ನು ಊಟಕ್ಕೆ ಮೊದಲು ಸೇವಿಸಿದರೆ ಮಧುಮೇಹದ ರೋಗಿಗಳಿಗೆ ಒಳ್ಳೆಯದು.
 
- ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ದೇಹದ ಉಷ್ಣದಿಂದಾಗುವ ಸಮಸ್ಯೆಗೆ ಪರಿಹಾರ ದೊರಕುತ್ತದೆ.
 
- ಎಳೆ ಸೌತೆಕಾಯಿ ತಿಂದರೆ ವೀರ್ಯಶುದ್ದಿಯಾಗುತ್ತದೆ.
 
- ಸೌತೆಕಾಯಿಯ ರಸವು ರೋಗಪೀಡಿತ ವಸಡುಗಳನ್ನು ಗುಣಪಡಿಸಿ ಅವುಗಳನ್ನು ತಾಜಾಗೊಳಿಸುತ್ತದೆ. 
 
- ಸೌತೆಕಾಯಿಯಲ್ಲಿರುವ ಖನಿಜವಾದ ಸಿಲಿಕಾವು ನಿಮ್ಮ ಕೂದಲು ಮತ್ತು ಉಗುರುಗಳನ್ನು ಹೊಳಪು ಮತ್ತು ಶಕ್ತಿಯುತವಾಗಿಸುತ್ತವೆ. 
 
- ಸೌತೆಕಾಯಿಯ ದುಂಡಗಿನ ಬಿಲ್ಲೆಗಳನ್ನು ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ಉರಿ‌ಕಡಿಮೆಯಾಗುತ್ತದೆ.
 
- ಸೌತೆಕಾಯಿಯ ನಿಯಮಿತ ಸೇವನೆಯಿಂದ ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ಗಳಿಗೆ, ಶರೀರ ಒಳಗಾಗುವದನ್ನು ತಪ್ಪಿಸುತ್ತದೆ
 
- ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. 
 
- ಸೌತೆಕಾಯಿಯಲ್ಲಿರುವ ಫೈಟೊ ರಾಸಾಯನಿಕಗಳು ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವಾದ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತದೆ.
 
- ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ