*ಮದುವೆ ದಿನ ಹತ್ತಿರ ಬರುತ್ತಿರುವಾಗ ವಧು ತಿನ್ನುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆ. ಇಲ್ಲವಾದರೆ ಇದು ಮುಖದ ಚರ್ಮದ ಮೇಲೆ ಪ್ರಭಾವಬೀರುತ್ತದೆ. ದೇಹದ ಪಿಎಚ್ ಪ್ರಮಾಣ ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸಬಾರದು. ಉದಾ: ಕಾರ್ಬೊನೇಟೆಡ್ ಪಾನೀಯಗಳು, ಆಲ್ಕೋಹಾಲ್, ಸಕ್ಕರೆ, ಮತ್ತು ಮೊಟ್ಟೆಯ ಹಳದಿ ಭಾಗಗಳನ್ನು ಸೇವಿಸಬಾರದು.
ಇದರಿಂದ ಮೊಡವೆಗಳು, ಚರ್ಮದ ಉರಿ, ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅದರ ಬದಲು ಪಿಎಚ್ ಪ್ರಮಾಣ ಸಮತೋಲನದಲ್ಲಿಡುವಂತಹ ಹಸಿರು ತರಕಾರಿಗಳು, ಅರಿಶಿನ, ಚಿಯಾ ಬೀಜಗಳು ಮತ್ತು ನಿಂಬೆಹಣ್ಣುಗಳನ್ನು ಸೇವಿಸಬೇಕು.
*ಹಾಗೇ ಮುಖ ತೊಳೆಯುವ ಸೋಪ್ ಬಗ್ಗೆಯೂ ಕಾಳಜಿ ಇರಬೇಕು. ತುಂಬಾ ಹಾರ್ಡ್ ಆಗಿರುವ ಸೋಪ್ ಗಳನ್ನು ಬಳಸಬಾರು. ಇದು ಮುಖದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಮೃದುವಾದ ಸೋಪ್ ಅಥವಾ ಫೇಸ್ ವಾಶ್ ಗಳನ್ನು ಬಳಸಿ
* ಬ್ಯೂಟಿ ಪಾರ್ಲರ್ ಗೆ ಹೋಗಿ ಕಿಮಿಕಲ್ ಯುಕ್ತ ಫೇಶಿಯಲ್ ಗಳನ್ನು ಮಾಡಿಸಬೇಡಿ. ಇದು ಕೆಲವೊಮ್ಮೆ ಮುಖದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಮನೆಯಲ್ಲೇ ತಯಾರಿಸುವಂತಹ ಫೇಸ್ ಪ್ಯಾಕ್ ಗಳನ್ನು ಬಳಸಿ. ಇದು ಮುಖಕ್ಕೆ ತುಂಬಾ ಒಳ್ಳೆಯದು.
*ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಇದರಿಂದ ಮುಖದ ಚರ್ಮ ಕಳೆಗುಂದುತ್ತದೆ. ಹೊರಗಡೆ ಹೋಗುವಾಗ ಸನ್ಸ್ಕ್ರೀನ್ ಬಳಸುವುದು ಉತ್ತಮ.
*ಸ್ನಾನ ಮಾಡಿದ ನಂತರ ಸೋಪ್ ನಿಂದಾಗಿ ಸ್ಕೀನ್ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಸ್ನಾನ ಮಾಡಿದ ತಕ್ಷಣ ಮಾಶ್ಚರೈಸಿಂಗ್ ಕ್ರೀಂಗಳನ್ನು ಬಳಸಿ ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.