ಆಪಲ್ ನಲ್ಲಿರುವ ವಿಷಾಂಶ ತೆಗೆಯಲು ಒಂದೊಳ್ಳೆ ಐಡಿಯಾ

ಬುಧವಾರ, 12 ಜುಲೈ 2017 (11:04 IST)
ಬೆಂಗಳೂರು: ಆಪಲ್ ದಿನಕ್ಕೊಂದು ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಕಾಲ ಇದಲ್ಲ. ಯಾಕೆಂದರೆ ಆಪಲ್ ಗೆ ಅಷ್ಟೊಂದು ವಿಷಾಂಶವಿರುತ್ತದೆ. ಆದರೆ ಈ ರಾಸಾಯನಿಕಗಳನ್ನು ಬೇರ್ಪಡಿಸಲು ಸುಲಭ ಉಪಾಯವಿದೆ.


ಆಪಲ್ ಬಳಸುವ ಮೊದಲು ಸಿಪ್ಪೆ ತೆಗೆದು ತಿನ್ನಬಹುದು. ಅದು ಇಷ್ಟವಿಲ್ಲವೆಂದರೆ ಚೂರಿ ಬಳಸಿ ಸಿಪ್ಪೆಯನ್ನು ಉಜ್ಜಿಕೊಂಡು ನಂತರ  ಬಿಸಿ ನೀರಿನಲ್ಲಿ ತೊಳೆದುಕೊಂಡು, ನಂತರ ನಲ್ಲಿ ನೀರಿನಲ್ಲಿ ಚೆನ್ನಾಗಿ ತೊಳೆದು ತಿನ್ನಬಹುದು.

ಇದಲ್ಲದಿದ್ದರೆ ಒಂದು ಚಮಚ ಲಿಂಬೆ ರಸ ಮತ್ತು ಇನ್ನೊಂದು ಚಮಚ ಬೇಕಿಂಗ್ ಸೋಡಾ ಬೆರೆಸಿದ ನೀರಿನಲ್ಲಿ ಮುಳುಗಿಸಿ. ನಂತರ ಸ್ವಲ್ಪ ಸಮಯ ಬಿಟ್ಟು, ಚೆನ್ನಾಗಿ ತೊಳೆದುಕೊಂಡು ಸೇವಿಸಿ. ಲಿಂಬೆ ರಸದ ಬದಲು ಇದೇ ರೀತಿ ವಿನೇಗರ್ ಬಳಸಿಯೂ ಶುಚಿಗೊಳಿಸಬಹುದು.

ಪೇಪರ್ ಅಥವಾ ಶುದ್ಧಬಟ್ಟೆ ಬಳಸಿ ಆಪಲ್ ನನ್ನು ಚೆನ್ನಾಗಿ ಒರೆಸಿಕೊಂಡು ನಂತರ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಬಳಸಿದರೆ ಆಪಲ್ ರಾಸಾಯನಿಕ ಮುಕ್ತವಾಗಿ ತಿನ್ನಲು ಯೋಗ್ಯವೆನಿಸುವುದು.

ಇದನ್ನೂ ಓದಿ.. ರವಿಶಾಸ್ತ್ರಿ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿರಲಿಲ್ಲ, ಅದಕ್ಕೆ ಗಂಗೂಲಿ ಮಾಡಿದ್ದು ಏನು ಗೊತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ