ಕಾಫಿ ಪ್ರಿಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್..!

ಶನಿವಾರ, 10 ಜುಲೈ 2021 (07:33 IST)
ಆರೋಗ್ಯ : ಮಧುಮೇಹ ಮತ್ತು ಹೃದ್ರೋಗದಂತಹ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುರಕ್ಷಿತ ವ್ಯಾಪ್ತಿಯಲ್ಲಿ ಇಡುವುದರ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು  ಕಾಫಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಂತೆ.







































ಆಹಾರದ ಮೊದಲು ಸೇವಿಸುವ ಬ್ಲ್ಯಾಕ್ ಕಾಫಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಮಾಡಬಹುದು ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಬಾತ್ ವಿಶ್ವವಿದ್ಯಾಲಯದ (ಯುಕೆ) ನ್ಯೂಟ್ರಿಷನ್, ವ್ಯಾಯಾಮ ಮತ್ತು ಚಯಾಪಚಯ ಕೇಂದ್ರದ ಸಂಶೋಧನೆಯು ಮುಂಜಾನೆಯ ಕಾಫಿಯಿಂದ ಆಗುವ ಆರೋಗ್ಯದ ಸಮಸ್ಯೆಗಳನ್ನು ಹಾಗೂ ಪರಿಣಾಮವನ್ನು ಗಮನಿಸಿದೆ. ರಾತ್ರಿಯ ಕಳಪೆ ನಿದ್ರೆಯು ನಮ್ಮ ಚಯಾಪಚಯ ಕ್ರಿಯೆಯ ಮೇಲೆ ಸೀಮಿತ ಪರಿಣಾಮ ಬೀರುತ್ತದೆ. ನಿದ್ರೆಯಿಂದ ನಿಮ್ಮನ್ನು ಪ್ರಚೋದಿಸುವ ಮಾರ್ಗವಾಗಿ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ (ಸಕ್ಕರೆ) ನಿಯಂತ್ರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ವಿಜ್ಞಾನಿಗಳು ತಿಳಿಸಿದ್ದಾರೆ. ಮಧುಮೇಹ ಮತ್ತು ಹೃದ್ರೋಗದಂತಹ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುರಕ್ಷಿತ ವ್ಯಾಪ್ತಿಯಲ್ಲಿ ಇಡುವುದರ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು  ಕಾಫಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಬಾತ್ ವಿಶ್ವವಿದ್ಯಾಲಯದ ಶರೀರ ಶಾಸ್ತ್ರಜ್ಞರು 29 ಆರೋಗ್ಯವಂತ ಪುರುಷರು ಮತ್ತು ಮಹಿಳೆಯರ ಮೇಲೆ ರಾತ್ರಿ ವೇಳೆ ಮೂರು ವಿಭಿನ್ನ ರೀತಿಯ ಅಧ್ಯಯನ ಕುರಿತು ಪ್ರಯೋಗವನ್ನು ನಡೆಸಿದರು. ಪ್ರಾಯೋಗದಲ್ಲಿ ಭಾಗವಹಿಸಿದವರು ಒಂದು ಸರಿಯಾದ ಪ್ರಮಾಣದ ರಾತ್ರಿಯ ನಿದ್ರೆಯನ್ನು ಹೊಂದಿದ್ದರು ಮತ್ತು ಬೆಳಿಗ್ಗೆ ಎಚ್ಚರವಾದಾಗ ಸಕ್ಕರೆ ಪಾನೀಯವನ್ನು ಸೇವಿಸುವಂತೆ ಹೇಳಲಾಯಿತು. ಮತ್ತೊಂದು ಸಂದರ್ಭದಲ್ಲಿ, ಭಾಗವಹಿಸಿದವರು ಒಂದು ಕಳಪೆ ರಾತ್ರಿಯ ನಿದ್ರೆಯನ್ನು ಹೊಂದಿದ್ದರು (ಅಲ್ಲಿ ಸಂಶೋಧಕರು ಪ್ರತಿ ಗಂಟೆಗೆ ಐದು ನಿಮಿಷಗಳ ಕಾಲ ಎಚ್ಚರಿಸುತ್ತಿದ್ದರು) ಮತ್ತು ನಂತರ ಎಚ್ಚರವಾದಾಗ ಅದೇ ಸಕ್ಕರೆ ಪಾನೀಯವನ್ನು ಸೇವಿಸುವಂತೆ ಹೇಳಲಾಯಿತು.
ಇನ್ನೊಂದು ಸಂದರ್ಭದಲ್ಲಿ, ಭಾಗವಹಿಸಿದವರು, ಅದೇ ಒಂದು ಕಳಪೆ ರಾತ್ರಿಯ ನಿದ್ರೆಯನ್ನು ಹೊಂದಿದ್ದರು (ಅಂದರೆ ರಾತ್ರಿಯಿಡೀ ಎಚ್ಚರವಾಗಿದ್ದರು) ಆದರೆ ಈ ಬಾರಿ ಸಕ್ಕರೆ ಪಾನೀಯ ಬದಲು 30 ನಿಮಿಷಗಳ ಮೊದಲು ಸಾಲಿಡ್ ಬ್ಲ್ಯಾಕ್ ಕಾಫಿಯನ್ನು ಸೇವಿಸುವಂತೆ ಹೇಳಲಾಯಿತು.
ಈ ಪ್ರತಿಯೊಂದು ಪರೀಕ್ಷೆಯಲ್ಲಿ, ಸಕ್ಕರೆ ಮಟ್ಟವನ್ನು ಅನುಸರಿಸಿ ಭಾಗವಹಿಸಿದವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ, ಇದು ಶಕ್ತಿಯ ವಿಷಯದಲ್ಲಿ (ಕ್ಯಾಲರಿಗಳು) ಬೆಳಗಿನ ಉಪಾಹಾರಕ್ಕಾಗಿ ಸಾಮಾನ್ಯವಾಗಿ ಸೇವಿಸಬಹುದಾದದನ್ನು ಕ್ಯಾಲರಿಗಳನ್ನು ಹೊಂದಿದೆ.
ಸಾಮಾನ್ಯ ರಾತ್ರಿಯ ನಿದ್ರೆಗೆ ಹೋಲಿಸಿದರೆ,ಒಂದು ಕಳಪೆ ರಾತ್ರಿಯ ಪ್ರಯೋಗದಲ್ಲಿ ಭಾಗವಹಿಸಿದವರ ರಕ್ತದಲ್ಲಿನ ಗ್ಲೂಕೋಸ್ / ಇನ್ಸುಲಿನ್ ಮಟ್ಟವು ಸರಿಯಾದ ಪ್ರಮಾಣದಲ್ಲಿತ್ತು ಎಂದು ಅವರ ಸಂಶೋಧನೆಗಳು ಎತ್ತಿ ತೋರಿಸುತ್ತದೆ.ಅದರೆ ಒಂದು ಕಳಪೆ ನಿದ್ರೆಯಿಂದ ನಮ್ಮ ಚಯಾಪಚಯದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಬೀರುವುದಿಲ್ಲ ಎಂದು ಈ ಸಂಶೋಧನೆಗಳು ಖಚಿತಪಡಿಸಿವೆ.

ಆದರೆ, ಬೆಳಗಿನ ಉಪಾಹಾರಕ್ಕೆ ಮುಂಚಿತವಾಗಿ ಸೇವಿಸುವ ಸಾಲಿಡ್ ಬ್ಲ್ಯಾಕ್ ಕಾಫಿ ಬೆಳಗಿನ ಉಪಾಹಾರದ ಜೊತೆ ಸೇರಿ ರಕ್ತದಲ್ಲಿನ ಗ್ಲೂಕೋಸ್ ಪ್ರತಿಕ್ರಿಯೆಯನ್ನು ಸುಮಾರು 50% ರಷ್ಟು ಹೆಚ್ಚಿಸಿದೆ. ಜನಸಂಖ್ಯಾ ಮಟ್ಟದ ಸಮೀಕ್ಷೆಗಳು ಕಾಫಿಯನ್ನು ಉತ್ತಮ ಆರೋಗ್ಯದೊಂದಿಗೆ ಸೇವಿಸಬಹುದು ಎಂದು ಸೂಚಿಸುತ್ತವೆಯಾದರೂ, ಹಿಂದಿನ ಸಂಶೋಧನೆಯು ಕೆಫೀನ್ ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಈ ಹಿಂದೆ ತೋರಿಸಿದೆ. ಆದ್ದರಿಂದ ಈ ಹೊಸ ಅಧ್ಯಯನವು ಒಂದು ಕೆಟ್ಟ ರಾತ್ರಿಯ ನಿದ್ರೆಯ ನಂತರ ಕಾಫಿ ಕುಡಿಯುವುದು ಯಾವುದೇ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಎಂದು ತಿಳಿಸಿದೆ. ಆದರೆ ಸರಿಯಾದ ಪ್ರಮಾಣ ಹಾಗೂ ನಿಮ್ಮ ದೇಹ ಸ್ಥಿತಿಯನ್ನು ಆಧಾರಿಸಿ ಕಾಫಿ ಸೇವನೆ ಮಾಡಬೇಕು ಎಂದು ಕೂಡ ತಿಳಿಸಿದೆ.
ಪ್ರಯೋಗದ ಮೇಲ್ವಿಚಾರಣೆ ವಹಿಸಿಕೊಂಡ ಬಾತ್ ವಿಶ್ವವಿದ್ಯಾಲಯದ ಪೋಷಣೆ, ವ್ಯಾಯಾಮ ಮತ್ತು ಚಯಾಪಚಯ ಕೇಂದ್ರದ ಸಹ ನಿರ್ದೇಶಕ ಪ್ರೊಫೆಸರ್ ಜೇಮ್ಸ್ ಬೆಟ್ಸ್ ಹೀಗೆ ವಿವರಿಸುತ್ತಾರೆ. ನಮ್ಮಲ್ಲಿ ಅರ್ಧದಷ್ಟು ಜನರು ಬೆಳಿಗ್ಗೆ ಎಚ್ಚರಗೊಂಡ ಕೂಡಲೇ ಬೇರೆ ಏನನ್ನೂ ಮಾಡುವ ಮೊದಲು ಕಾಫಿ ಕುಡಿಯುತ್ತಾರೆ ಎಂದು ನಮಗೆ ತಿಳಿದಿದೆ.   ನಾವು ಹೆಚ್ಚು ದಣಿದಿದ್ದೇವೆ, ನಮಗೆ ಸಾಲಿಡ್ ಕಾಫಿ ಬೇಕು ಎಂದು ನಮಗೆ ಅನಿಸುತ್ತದೆ. ಆದರೆ, ಈ ಅಧ್ಯಯನವು ಕಾಫಿಯಿಂದ ಯಾವ ರೀತಿಯ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು ಹಾಗೂ ವಿಶೇಷವಾಗಿ ನಮ್ಮ ಚಯಾಪಚಯ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂಬ ಸಾಮನ್ಯ ಜ್ಞಾನವನ್ನು ನಾವು ತಿಳಿದಿಕೊಳ್ಳಲು ಸಹಾಯ ಮಾಡಿತು ಎಂದು ವಿವರಿಸುತ್ತಾರೆ. ಕಳಪೆ ರಾತ್ರಿಗಳ ನಂತರ ನಮ್ಮ ದೇಹದಲ್ಲಿನ ರಕ್ತದ ಸಕ್ಕರೆ ಮಟ್ಟದ ನಿಯಂತ್ರಣವು ದುರ್ಬಲಗೊಳ್ಳುತ್ತದೆ. ಆದರಿಂದ ಸರಳವಾಗಿ ಹೇಳುವುದಾದರೆ ನಾವು ಮೊದಲು ಆಹಾರವನ್ನು ಸೇವಿಸಬೇಕು ನಂತರ ಸಾಲಿಡ್ ಬ್ಲ್ಯಾಕ್ ಕಾಫಿಯನ್ನು ಸೇವಿಸುವುದು ಉತ್ತಮ.
ಪ್ರಮುಖ ಸಂಶೋಧಕ ಬಾತ್ ಅಟ್ ಹೆಲ್ತ್ ವಿಭಾಗದ ಹ್ಯಾರಿ ಸ್ಮಿತ್ ಅವರು ಹೀಗೆ ಹೇಳಿದ್ದಾರೆ. ಒಂದು ಕಳಪೆ ರಾತ್ರಿ ನಿದ್ರೆಯಲ್ಲಿ ಮಾತ್ರ ಭಾಗವಹಿಸಿದವರ ರಕ್ತದಲ್ಲಿನ ಗ್ಲೂಕೋಸ್ ( ಸಕ್ಕರೆ) ಮಟ್ಟವನ್ನು ಹಾಗೂ ಇನ್ಸುಲಿನ್ ಪ್ರತಿಕ್ರಿಯೆಯನ್ನು ಹದಗೆಡಿಸಲಿಲ್ಲ ಎಂದು ತೋರಿಸುತ್ತದೆ. ನಮ್ಮಲ್ಲಿ  ಸರಿಯಾದ ಪ್ರಮಾಣದ ನಿದ್ರೆಯೊಂದಿಗೆ ಸಾಲಿಡ್ ಕಾಫಿ ಅನ್ನು ಸೇವಿಸುವುದರಿಂದ ಅನೇಕರಿಗೆ, ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ 50% ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತೆಯೇ, ವ್ಯಕ್ತಿಗಳು ಬೆಳಿಗ್ಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯದೊಂದಿಗೆ ಬೆಳಿಗ್ಗೆ ಹಲ್ಲು ರಹೀತ ಕಾಫಿಯ ಉತ್ತೇಜಕ ಪ್ರಯೋಜನಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸಬೇಕು ಮತ್ತು  ಬೆಳಗಿನ ಉಪಾಹಾರದ ನಂತರ ಕಾಫಿಯನ್ನು ಸೇವಿಸುವುದು ಉತ್ತಮ.
ನಮ್ಮ ಚಯಾಪಚಯ ಕ್ರಿಯೆಯಲ್ಲಿ ನಿದ್ರೆಯ ಪರಿಣಾಮಗಳ ಕುರಿತು ನಾವು ಕಲಿಯಬೇಕಾದದ್ದು ತುಂಬಾ ಇದೆ, ಉದಾಹರಣೆಗೆ ಎಷ್ಟು ಕಳಪೆ ನಿದ್ರೆಯಿಂದ ನಮ್ಮ ಚಯಾಪಚಯ ಕ್ರಿಯೆಯನ್ನು ದುರ್ಬಲಗೊಳ್ಳುತ್ತವೆ ಮತ್ತು ಇದರ ಕೆಲವು ದೀರ್ಘಕಾಲೀನ ಪರಿಣಾಮಗಳು ಯಾವುವು, ಹಾಗೆಯೇ ವ್ಯಾಯಾಮ ಎಷ್ಟು ಮುಖ್ಯ, ಎಂದು ತಿಳಿದಿಕೊಳ್ಳಲ್ಲು ಮೇಲೆ ತಿಳಿಸಿರುವ ಅಧ್ಯನವು ನಾಮಗೆ ಸಹಾಯ ಮಾಡುತ್ತದೆ.
ಅಕ್ಟೋಬರ್ 1 ಅನ್ನು ಅಂತರರಾಷ್ಟ್ರೀಯ ಕಾಫಿ ದಿನ ಎಂದು ಕರೆಯುತ್ತಾರೆ.
ವಿಶ್ವದಾದ್ಯಂತ ವ್ಯಾಪಕವಾಗಿ ಆಚರಿಸುತ್ತಾರೆ. ಕಾಫಿ ಈಗ ವಿಶ್ವದ ಅತ್ಯಂತ ಜನಪ್ರಿಯ ಪಾನೀಯವಾಗಿದ್ದು, ಪ್ರತಿದಿನ ಸುಮಾರು ಎರಡು ಶತಕೋಟಿ ಕಪ್ ಕಾಫಿಯನ್ನು ಸೇವಿಸಲಾಗುತ್ತದೆ ಎಂದು ವರದಿ ಮೂಲಕ ತಿಳಿದು ಬಂದಿದೆ.ಯುಎಸ್ನಲ್ಲಿ ಸುಮಾರು 18 ವರ್ಷದವರು ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಅಧಿಕ ಕಾಫಿಯನ್ನು ಕುಡಿಯುತ್ತಾರೆ, ಯುಕೆ ಯಲ್ಲಿ, ಬ್ರಿಟಿಷ್ ಕಾಫಿ ಅಸೋಸಿಯೇಷನ್ ಪ್ರಕಾರ, 80% ಕುಟುಂಬಗಳು ಮನೆಗಾಗಿ ಇನ್ಸ್ಟಂಟ್ ಕಾಫಿಯನ್ನು ಖರೀದಿಸುತ್ತಾರೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ