ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವಿಸಲೇಬೇಕು ಯಾಕೆ ಗೊತ್ತಾ?

ಮಂಗಳವಾರ, 31 ಅಕ್ಟೋಬರ್ 2017 (08:45 IST)
ಬೆಂಗಳೂರು: ಚಳಿಗಾಲ ಬಂತೆಂದರೆ ನೆಲ್ಲಿಕಾಯಿ ಸೀಸನ್ ಶುರು. ವಿಟಮಿನ್ ಸಿ, ಕಬ್ಬಿಣದಂಶ ಹೇರಳವಾಗಿರುವ ನೆಲ್ಲಿಕಾಯಿ ನಮ್ಮ ದೇಹಕ್ಕೆ ತುಂಬಾ ಉತ್ತಮ.

 
ನೆಲ್ಲಿಕಾಯಿ ತಿಂದರೆ ಆರೋಗ್ಯ ವೃದ್ಧಿಸುತ್ತದೆ, ಕೂದಲು ಚೆನ್ನಾಗಿ ಬೆಳೆಯುತ್ತದೆ, ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ ಎಂದೆಲ್ಲಾ ನಾವು ಕೇಳಿದ್ದೆವು. ಅದೇ ರೀತಿ ಇದು ಚಳಿಗಾಲದಲ್ಲಿ ಬರುವ ಶೀತ, ಕಫ ಸಂಬಂಧಿ ಸಮಸ್ಯೆಗೂ ಪರಿಹಾರ ನೀಡುತ್ತದೆ.

ಪ್ರತಿ ನಿತ್ಯ ನೆಲ್ಲಿ ಕಾಯಿ ರಸಕ್ಕೆ ಸಮಪ್ರಮಾಣದಲ್ಲಿ ಜೇನು ತುಪ್ಪು ಸೇರಿಸಿಕೊಂಡು ಸೇವಿಸುವುದರಿಂದ ಗಂಟಲು ಕೆರೆತ, ಶೀತ ಮತ್ತು ಕೆಮ್ಮಿನಿಂದ ಪರಿಹಾರ ಸಿಗುತ್ತದೆ. ಹಾಗೆಯೇ ನೆಲ್ಲಿಕಾಯಿ ರಸಕ್ಕೆ ಹದ ಬಿಸಿ ನೀರು ಸೇರಿಸಿಕೊಂಡು ಗಾರ್ಗಲ್ ಮಾಡಿಕೊಳ್ಳುವುದರಿಂದ ಬಾಯಿ ಹುಣ್ಣು ನಿವಾರಣೆಯಾಗಬಹುದು. ಅದೇ ರೀತಿ ನೆಲ್ಲಿಕಾಯಿ ಜ್ಯೂಸ್ ನಿಯಮಿತವಾಗಿ ಸೇವಿಸುತ್ತಿದ್ದರೆ, ಉಸಿರಾಟ ಸಂಬಂಧಿ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ