ಹುಣಸೆ ಹುಳಿ ಸೊಪ್ಪಿನಲ್ಲಿದೆ ಆರೋಗ್ಯದ ಗುಟ್ಟು

ಶನಿವಾರ, 24 ಜೂನ್ 2017 (10:05 IST)
ಬೆಂಗಳೂರು: ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ಪದಾರ್ಥ ಹುಣಸೆ ಹುಳಿ. ಹುಳಿ ಸೊಪ್ಪ ಕೂಡಾ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು ಎಂದರೆ ನೀವು ನಂಬಲೇ ಬೇಕು.


ವಿದೇಶಗಳಲ್ಲೆಲ್ಲಾ ಹುಣಸೆ ಹುಳಿ ಸೊಪ್ಪು ಸಲಾಡ್,  ಮಾಂಸದಡುಗೆಯಲ್ಲಿ ಹೇರಳವಾಗಿ ಬಳಸುತ್ತಾರೆ. ನಮ್ಮ ದೇಶದಲ್ಲೂ ಹುಣಸೆ ಹುಳಿ ಸೊಪ್ಪು ಬಳಸಿ ಚಟ್ನಿ ಮಾಡುತ್ತಾರೆ. ಅದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು.

ಇದರಲ್ಲಿರುವ ನೋವು ನಿವಾರ ಗುಣದಿಂದಾಗಿ ಸಂಧಿ ನೋವು, ಮೈ ಕೈ ನೋವು ಇರುವವರು ಹುಳಿ ಸೊಪ್ಪು ಸೇವನೆ ಮಾಡುವುದು, ಎಣ್ಣೆ ತಯಾರಿಸಿ ಹಚ್ಚಿಕೊಂಡರೆ ಉತ್ತಮ. ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿ ಹೊಂದಿದೆ.

ಗಾಯಗಳು, ಚರ್ಮದ ಅಲರ್ಜಿಯಾಗಿದ್ದರೆ ಹುಳಿ ಸೊಪ್ಪನ್ನು ನೀರಲ್ಲಿ ನೆನೆ ಹಾಕಿ ಹಚ್ಚಿಕೊಳ್ಳಬಹುದು. ಗಂಟಲು ನೋವು, ಶೀತವಾಗಿದ್ದರೆ ಚಹಾ ಮಾಡುವಾಗ ಎರಡು ಎಲೆ ಹುಳಿ ಸೊಪ್ಪು ಬಳಸಬಹುದು.

ಅಷ್ಟೇ ಅಲ್ಲ, ಮುಟ್ಟಿನ ಸಂದರ್ಭದಲ್ಲಿ ಬರುವ ಹೊಟ್ಟೆ ನೋವು, ಕಾಲು ನೋವು ಮುಂತಾದ ಸಮಸ್ಯೆಗಳಿಗೂ ಇದರ ಬಳಕೆ ಉತ್ತಮ. ಇಷ್ಟೆಲ್ಲಾ ಮನೆ ಮದ್ದು ನಮ್ಮ ಹಿತ್ತಲಲ್ಲೇ ಇರುವಾಗ ಇನ್ನೇಕೆ ಚಿಂತೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ