ಬೆಂಗಳೂರು: ಪ್ರತಿನಿತ್ಯ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಸಾಧಾರಣವಾಗಿ ನಮಗೆಲ್ಲಾ ಇರುತ್ತದೆ. ಆದರೆ ಆ ಹಾಲಿಗೆ ಕೊಂಚ ಅರಸಿನ ಹುಡಿ ಹಾಕಿ ಕುಡಿದು ನೋಡಿ. ಹಲವು ರೋಗಗಳಿಗೆ ಇದುವೇ ಮದ್ದು.
ಅರಸಿನ ವಿಷಕಾರಿ ಅಂಶವನ್ನು ತೆಗೆಯುವ ಗುಣ ಹೊಂದಿದೆ. ಹಾಗೆಯೇ ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಹಾಲಿಗೆ ಅರಸಿನ ಪುಡಿ ಹಾಕಿ ಕುಡಿಯುವುದರಿಂದ ನಿಮಗೆ ಬೇಗನೇ ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟಬಹುದು!
ಇನ್ನು ಯಾವುದಾದರೂ, ಗಾಯಗಳು, ಹುಣ್ಣುಗಳಿದ್ದರೆ ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಬೇಗನೇ ಗುಣವಾಗುತ್ತದೆ. ಇದರಲ್ಲಿ ಹುಣ್ಣುಗಳು ಕೀವಾಗದಂತೆ ತಡೆಗಟ್ಟುವ ಗುಣವಿದೆ. ಅಲ್ಲದೆ ಕೀಲು, ಸಂಧು ನೋವುಗಳು, ಮೈ ಕೈನೋವು ಇದ್ದರೆ ಅರಸಿನ ರಾಮಬಾಣ. ಅಲ್ಲದೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.
ಹಾಗೆಯೇ ಚರ್ಮದ ಅಲರ್ಜಿ, ಚರ್ಮ ಸಂಬಂಧೀ ಇತರ ಖಾಯಿಲೆಗಳು ಇದ್ದಲ್ಲಿ ಅರಸಿನ ಬಹಳ ಉಪಕಾರಿ. ಹಾಗಾಗಿ ಪ್ರತಿನಿತ್ಯ ಹಾಲು ಕುಡಿಯುವಾಗ ಒಂದು ಚಿಟಿಕಿ ಅರಸಿನ ಪುಡಿ ಹಾಕಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.