ಉತ್ತಮ ಜೀವನ ಕೌಶಲ್ಯವೇ ಆರೋಗ್ಯದ ಭಾಗ್ಯ!

ಮಂಗಳವಾರ, 16 ನವೆಂಬರ್ 2021 (09:11 IST)
ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವಿದ್ದರೆ ಎಲ್ಲಾ ಭಾಗ್ಯವು ಇದ್ದಂತೆ ಎನ್ನುವುದು ಇದರ ನಿಜವಾದ ಅರ್ಥ.
ಆರೋಗ್ಯವಿಲ್ಲದೆ ಇದ್ದರೆ ಸಂಪಾದಿಸಿದ ಹಣವೆಲ್ಲವೂ ಆಸ್ಪತ್ರೆಗೆ ಹೋಗಿ ಸುರಿಯಬೇಕಾಗುತ್ತದೆ. ಇದರಿಂದ ಆರೋಗ್ಯದ ಕಾಳಜಿ ವಹಿಸುವುದು ಅತೀ ಅಗತ್ಯವಾಗಿ ಇರುವುದು. ಆರೋಗ್ಯವಿಲ್ಲದೆ ಇದ್ದರೆ ಖಂಡಿತವಾಗಿಯೂ ಜೀವನ ದುಸ್ತರ ಎನಿಸುವುದು.
ಅದರಲ್ಲೂ ಇಂದಿನ ದಿನಗಳಲ್ಲಿ ಕಲುಷಿತ ವಾತಾವರಣ, ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಆರೋಗ್ಯದ ಮೇಲೆ ಅತಿಯಾದ ಒತ್ತಡ ಬೀಳುವುದು. ನಿಮ್ಮ ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು.
ಆಹಾರ ಪದ್ದತಿ
ದಿನದ ಆಹಾರದಲ್ಲಿ ಉಪಾಹಾರವು ಅತೀ ಪ್ರಾಮುಖ್ಯವಾಗಿರುವ ಆಹಾರವಾಗಿರುವುದು. ದಿನದ ಆರಂಭ ಮಾಡಲು ನೀವು ತುಂಬಾ ಶಕ್ತಿಯುತ ಉಪಾಹಾರವನ್ನು ಸೇವಿಸಬೇಕು. ಉಪಾಹಾರದಿಂದ ನಿಮಗೆ ದಿನಪೂರ್ತಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಶಕ್ತಿ ಸಿಗುವುದು. ಇದರಿಂದ ಉಪಾಹಾರದಲ್ಲಿ ಹೆಚ್ಚಿನ ಪೋಷಕಾಂಶ ಗಳನ್ನು ಸೇರಿಸಿಕೊಳ್ಳಿ. ಹೊಟ್ಟೆಗೆ ಭಾರವಾಗುವ ಅಥವಾ ಎಣ್ಣೆಯಂಶವಿರುವ ಆಹಾರವನ್ನು ನೀವು ಉಪಾಹಾರಕ್ಕೆ ಸೇವಿಸಬೇಡಿ.
ವ್ಯಾಯಾಮ
ಜನರು ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ವ್ಯಾಯಾಮದಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಪ್ಪಿಸಿಕೊಳ್ಳುವುದು ತುಂಬಾ ಸುಲಭ. ಪ್ರತಿಯೊಬ್ಬರು ದಿನನಿತ್ಯ ವ್ಯಾಯಾಮ ಮಾಡುವುದೇ ಇಲ್ಲ. ನಿಮಗೆ ಆರೋಗ್ಯವಾಗಿ ಇರಬೇಕು ಎಂದಿದ್ದರೆ ಆಗ ನೀವು ವ್ಯಾಯಾಮವನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಕಾರಿ ಜೀವನ ನಡೆಸಲು ಪ್ರತಿನಿತ್ಯ ನೀವು 30 ನಿಮಿಷ ವ್ಯಾಯಾಮ ಮಾಡಬೇಕು. ಇದರಿಂದ ಇಂದಿನಿಂದಲೇ ನೀವು ವ್ಯಾಯಾಮ ಆರಂಭ ಮಾಡಿ ಮತ್ತು ಉದಾಸೀನತೆಯನ್ನು ದೂರ ಮಾಡಿ.
ಪ್ರೋಟೀನ್
ಹೆಚ್ಚಾಗಿ ಜನರು ತಾವು ತಿನ್ನುವಂತಹ ಆಹಾರದಲ್ಲಿ ಎಷ್ಟು ಮಟ್ಟಿನ ಪ್ರೋಟೀನ್ ಇದೆ ಎಂದು ತಿಳಿದುಕೊಳ್ಳದೆ ಇರುವ ಕಾರಣದಿಂದಾಗಿ, ಕೆಲವೊಂದು ಸಲ ಪ್ರೋಟೀನ್ ಕೊರತೆ ಉಂಟಾಗುವುದು. ಯಾಕೆಂದರೆ ಪ್ರೋಟೀನ್ ನ ಲಾಭಗಳು ತಿಳಿಯದೆ ಇರುವ ಕಾರಣದಿಂದಾಗಿ ಈ ರೀತಿಯ ತಪ್ಪುಗಳು ನಡೆಯುತ್ತಲೇ ಇರುತ್ತದೆ. ಆದರೆ ಪ್ರೋಟೀನ್ ಎನ್ನುವುದು ಕೇವಲ ಸ್ನಾಯು ಖಂಡಗಳನ್ನು ಬೆಳೆಸಲು ಮಾತ್ರವಲ್ಲದೆ, ದೇಹಕ್ಕೆ ಬೇಕಾಗಿ ರುವಂತಹ ಪ್ರಮುಖ ಶಕ್ತಿಯಾಗಿದೆ.
ಮಾನಸಿಕ ಆರೋಗ್ಯ
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಅತೀ ಮುಖ್ಯ ವಾಗಿರುವುದು. ಆದರೆ ಹೆಚ್ಚಿನ ಜನರು ದೈಹಿಕ ಆರೋಗ್ಯದ ಕಡೆ ಮಾತ್ರ ಗಮನ ಹರಿಸುವರು ಮತ್ತು ಮಾನಸಿಕ ಆರೋಗ್ಯವನ್ನು ಕಡೆಗಣಿಸುವರು. ಸಂಪೂರ್ಣ ಆರೋಗ್ಯವು ಬೇಕೆಂದಾದರೆ ಆಗ ಮಾನಸಿಕ ಆರೋಗ್ಯವು ಅತೀ ಅಗತ್ಯವಾಗಿರುವುದು. ಮನಸ್ಸನ್ನು ಶಾಂತಗೊಳಿಸಲು ನೀವು ಉಸಿರಾಟದ ವ್ಯಾಯಾಮ ಮಾಡ ಬಹುದು. ಎಷ್ಟು ಸಾಧ್ಯವೋ ಅಷ್ಟು ನೀವು ಒತ್ತಡದಿಂದ ಮುಕ್ತವಾಗಿರಿ. ನಿಮಗೆ ಅಗತ್ಯ ಎಂದು ಅನಿಸಿದರೆ, ಆಗ ಯಾವುದೇ ಹಿಂಜರಿಕೆ ಇಲ್ಲದೆ ಮನಶಾಸ್ತ್ರಜ್ಞರನ್ನು ಹೋಗಿ ಭೇಟಿಯಾಗಿ.
ನಿದ್ರೆ
ಸರಿಯಾದ ನಿದ್ರೆಯು ಅತೀ ಅಗತ್ಯವಾಗಿ ಬೇಕು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ದೇಹದ ಕಾರ್ಯನಿರ್ವಹಣೆ ಮೇಲೆ ಅದು ಪರಿಣಾಮ ಬೀರುವುದು. ದಿನವನ್ನು ಉತ್ತಮವಾಗಿ ಆರಂಭ ಮಾಡಲು ಮತ್ತು ಸರಿಯಾಗಿ ದಿನದ ಕೆಲಸಗಳನ್ನು ಮಾಡಲು ಸರಿಯಾದ ನಿದ್ರೆ ಕೂಡ ಅತೀ ಅಗತ್ಯವಾಗಿ ಬೇಕು. ನಿದ್ರಿಸುವ ಕೆಲವು ಕೆಟ್ಟ ಹವ್ಯಾಸದಿಂದಾಗಿ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ನೀವು ಸರಿಯಾಗಿ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ