ವಿದ್ಯಾರ್ಥಿಗಳಿಗಾಗಿ ಆರೋಗ್ಯ ಸಲಹೆಗಳು..

ಗುರುವಾರ, 16 ಆಗಸ್ಟ್ 2018 (16:57 IST)
ವಿದ್ಯಾರ್ಥಿಗಳು ಕಾರ್ಯನಿರತರಾಗುತ್ತಾರೆ. ಕಠಿಣವಾದ ಪಠ್ಯಕ್ರಮ, ಅತ್ಯಾಕರ್ಷಕ ಸಾಮಾಜಿಕ ಜೀವನ ಮತ್ತು ವಯಕ್ತಿಕ ಬದ್ಧತೆಗಳ ನಡುವೆ ಅವರು ತಮ್ಮ ಕಾಳಜಿಯನ್ನೂ ಸಹ ತೆಗೆದುಕೊಳ್ಳಲು ಮರೆಯುತ್ತಾರೆ. ಆದರೆ ಉತ್ತಮವಾದ ಆರೋಗ್ಯವಿಲ್ಲದೆ, ನಿಮ್ಮ ಇತರ ಚಟುವಟಿಕೆಗಳಲ್ಲಿ ಯಾವುದೂ ಸಾಧ್ಯವಿಲ್ಲ. ಆದ್ದರಿಂದ ನೀವು ಜೀವನದಲ್ಲಿ ಅನುಸರಿಸಬಹುದಾದ ಉತ್ತಮ ಪದ್ಧತಿಗಳನ್ನು ಅಭಿವೃದ್ಧಿಪಡಿಸುವುದು ತುಂಬಾ ಮುಖ್ಯವಾಗಿದೆ. ಅದಕ್ಕಾಗಿ ಕೆಲವು ಸಲಹೆಗಳು ಈ ಕೆಳಗಿನಂತಿವೆ,
1. ಸರಿಯಾಗಿ ತಿನ್ನಿ - ಇದು ಸ್ವಲ್ಪ ಕಷ್ಟವಾಗಿ ಕಾಣಿಸಿದರೂ ಸ್ವಲ್ಪ ಸ್ವಲ್ಪವೇ ಅಳವಡಿಸಿಕೊಂಡರೆ ಸುಧಾರಿಸಬಹುದಾಗಿದೆ. ಕೆಲವು ಸರಳವಾದ ನಿಯಮಗಳನ್ನು ಅನುಸರಿಸಲು ಪ್ರಯತ್ನಿಸಿ: ಬೆಳಗಿನ ತಿಂಡಿಯನ್ನು ತಪ್ಪಿಸದಿರುವುದು, ಊಟವನ್ನು ಮತ್ತು ತಿಂಡಿಯನ್ನು ತಪ್ಪಿಸದೇ ನಿಯಮಿತವಾಗಿ ಸೇವಿಸುವುದು. ಸಕ್ಕರೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಸೇವಿಸದೇ ಇರುವಾಗ ಅದನ್ನು ಸಮತೋಲನಗೊಳಿಸಲು ಸರಿಯಾದ ಪ್ರಮಾಣದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಹಾಲಿನ ಉತ್ಪನ್ನಗಳು ಮತ್ತು ಪ್ರೋಟೀನ್‌ಗಳನ್ನು ಸೇವಿಸಿ.
 
2. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ - ನಿಮ್ಮ ದೇಹವನ್ನು ಆರೋಗ್ಯವಾಗಿ ಹಾಗೂ ಉತ್ತಮ ಆಕಾರದಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ. ಆದರೆ ಅದಕ್ಕಾಗಿ ನೀವು ಕಠಿಣ ಪರಿಶ್ರಮವನ್ನು ಪಡಬೇಕಾಗಿಲ್ಲ. ನಿಮ್ಮ ತರಗತಿಗಳಿಗೆ ನಡೆದೇ ಹೋಗಿ, ಶಾರೀರಿಕ ಫಿಟ್ನೆಸ್ ಅನ್ನು ಒಳಗೊಂಡಿರುವ ತರಗತಿಗಳಿಗೆ ಸೇರಿಕೊಳ್ಳಿ ಅಥವಾ ನಿಮ್ಮ ಕ್ಯಾಂಪಸ್ ವಿದ್ಯಾರ್ಥಿಗಳಿಗಾಗಿ ನೀಡಿದ ಸೌಲಭ್ಯಗಳನ್ನು ಬಳಸಿಕೊಳ್ಳಿ.
 
3. ಸಾಕಷ್ಟು ನಿದ್ದೆ ಮಾಡಿ - ನಿಮಗೆ ಹೆಚ್ಚಿನ ವಿದ್ಯಾಭ್ಯಾಸವಿರುವಾಗ, ನಿಮಗೆ ಇತರ ಕೆಲಸಗಳಿರುವಾಗ ಅಥವಾ ನೀವು ಇತರ ಸ್ನೇಹಿತರೊಂದಿಗೆ ರಾತ್ರಿ ಪೂರ್ತಿ ಪಾರ್ಟಿ ಮಾಡಿ ಹೊರಗಿರುವಾಗ ನೀವು ಸಾಕಷ್ಟು ನಿದ್ದೆಯನ್ನು ಮಾಡಲಾಗುವುದಿಲ್ಲ. ಆದರೆ ಸಾಕಷ್ಟು ನಿದ್ದೆ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ತಜ್ಞರು ಕಾಲೇಜು ವಿದ್ಯಾರ್ಥಿಗಳು 7-9 ಗಂಟೆಗಳ ನಿದ್ದೆಯನ್ನು ಮಾಡಬೇಕು ಎಂದು ಶಿಫಾರಸು ಮಾಡುತ್ತಾರೆ.
ಇದರೊಂದಿಗೆ ನಿಗದಿತ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ. ಮಲಗುವ ಮೊದಲು ನಿಮ್ಮ ಕೋಣೆಯ ದೀಪವನ್ನು ಮತ್ತು ಮೊಬೈಲ್ ಸೇರಿದಂತೆ ಇತರ ಇಲೆಕ್ಟ್ರಾನಿಕ್ ಸಾಧನಗಳನ್ನು ಆಫ್ ಮಾಡಿರಿ. ಇದರೊಂದಿಗೆ ಸಾಧ್ಯವಾದಷ್ಟು ಮಲಗುವ ಸಮಯದಲ್ಲಿ ಕೆಫೇನ್ ಅಂಶವಿರುವ ತಿಂಡಿಯನ್ನು ಅಥವಾ ಪಾನೀಯವನ್ನು ಸೇವಿಸಬೇಡಿ.
 
4. ನಿಮ್ಮ ಕೈಗಳನ್ನು ತೊಳೆದುಕೊಳ್ಳಿ - ವಿದ್ಯಾರ್ಥಿಗಳಿಗೆ ಒಬ್ಬರಿಂದ ಒಬ್ಬರಿಗೆ ಕೀಟಾಣುಗಳನ್ನು ಹರಡುವುದು ಬಹಳ ಸುಲಭವಾಗಿದೆ. ಕೈಗಳನ್ನು ತೊಳೆಯದೇ ಇರುವುದು ಇದಕ್ಕೆ ಇನ್ನಷ್ಟು ಸಹಾಯ ಮಾಡುತ್ತದೆ. ಅನೇಕ ರೋಗಗಳನ್ನು ಹರಡುವ ಸೂಕ್ಷ್ಮಾಣುಜೀವಿಗಳನ್ನು ಹರಡುವುದರಿಂದ ತಡೆಯಲು ಕೈಗಳನ್ನು ತೊಳೆಯುವುದು ಸುಲಭ ಉಪಾಯವಾಗಿದೆ. ವಿಶೇಷವಾಗಿ ಊಟದ ಸಮಯದಲ್ಲಿ ಮತ್ತು ನಿಮ್ಮ ಕಣ್ಣುಗಳು, ಮೂಗು, ಬಾಯಿಯನ್ನು ಸ್ಪರ್ಷಿಸಿದಾಗ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
 
5. ಧೂಮಪಾನ ಮಾಡಬೇಡಿ - ಅತಿ ವಿರಳವಾಗಿ ಮಾಡುವ ಧೂಮಪಾನವೂ ಸಹ ನಿಮ್ಮ ಜೀವನವನ್ನು ಅಪಾಯಕ್ಕೆ ತರಬಹುದಾಗಿದೆ. ಧೂಮಪಾನವನ್ನು ಬಿಡಲು ನೀವು ಬಿಟ್ಟುಬಿಡಲು ಬಯಸಿದರೆ, ನಿಮ್ಮ ವಿದ್ಯಾರ್ಥಿ ಆರೋಗ್ಯ ಕೇಂದ್ರವು ನಿಮಗೆ ಸಹಾಯ ಮಾಡುವ ಅನೇಕ ಕಾರ್ಯಕ್ರಮಗಳನ್ನು ಹೊಂದಿದೆ.
 
6. ಕೆಫೇನ್ ಮತ್ತು ಸಕ್ಕರೆಯ ಪಾನೀಯಗಳನ್ನು ಸಾಧ್ಯವಾದಷ್ಟು ತಪ್ಪಿಸಿ - ಈ ಪಾನೀಯಗಳು ನಿಮಗೆ ಓದುವಾಗ ಹೆಚ್ಚು ಯುಕ್ತವಾಗಿ ತೋರುತ್ತದೆಯಾದರೂ ಪ್ರೋಟೀನ್ ಮತ್ತು ಫೈಬರ್ ಅನ್ನು ಒಳಗೊಂಡಿರುವ ಹೆಚ್ಚಿನ ಆಹಾರಗಳು ದೀರ್ಘಾವಧಿಯಲ್ಲಿ ನಿಮಗೆ ಉತ್ತಮವಾಗಿದೆ.
 
7. ಫ್ಲೂ ಶಾಟ್ ಪಡೆಯಿರಿ - ಯಾವಾಗಲೂ ಕಾಯಿಲೆಗಳು ಬರುವ ಮುನ್ನವೇ ಎಚ್ಚರಿಕೆವಹಿಸುವುದು ಉತ್ತಮವಾಗಿದೆ. ಅನಾರೋಗ್ಯವನ್ನು ತಪ್ಪಿಸಲು ಇದು ಸುಲಭವಾದ ಮಾರ್ಗವಾಗಿದೆ. ಫ್ಲೂ ಸೀಸನ್‌ಗೂ ಮೊದಲು ನೀವು ಫ್ಲೂ ಶಾಟ್ ತೆಗೆದುಕೊಂಡರೆ ಅದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.
 
8. ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ - ಹೈಡ್ರೈಟೆಡ್ ಆಗಿ ಉಳಿಯುವಿಕೆಯು ನಿಮಗೆ ದಿನವಿಡೀ ಹೆಚ್ಚು ಶಕ್ತಿಯನ್ನು ನೀಡುತ್ತದೆ, ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ, ಅತಿಯಾಗಿ ತಿನ್ನುವಿಕೆಯನ್ನು ತಡೆಯಲು ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಈಗಲೇ ನಿಮ್ಮೊಂದಿಗೆ ಒಂದು ನೀರಿನ ಬಾಟಲಿಯನ್ನು ಯಾವಾಗಲೂ ಇಟ್ಟುಕೊಳ್ಳಿ.
 
ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಪರಿಸರಕ್ಕೆ ಹಾನಿ ಮಾಡುವ ಬದಲು ಮರುಬಳಕೆ ಮಾಡಬಹುದಾದಂತಹ ಬಾಟಲಿಗಳನ್ನು ಬಳಸಿ.
 
9. ವಿಶ್ರಾಂತಿ ಪಡೆಯಿರಿ - ಒತ್ತಡಕ್ಕೆ ಒಳಗಾಗುವುದು ತುಂಬಾ ಸುಲಭವಾಗಿದೆ ಆದರೆ ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನಿಮಗೆ ಸಾಕಷ್ಟು ವಿರಾಮಗಳನ್ನು ನೀಡಲು, ದಿನನಿತ್ಯದ ಆರೋಗ್ಯಕರ ವಿಧಾನವನ್ನು ಕಾಪಾಡಿಕೊಳ್ಳಲು ಮತ್ತು ಕಡಿಮೆ ಒತ್ತಡವನ್ನು ಹೊಂದಿದ ಹವ್ಯಾಸಗಳು, ಸ್ನೇಹಿತರೊಂದಿಗಿನ ತಿರುಗಾಟ ಮತ್ತು ವ್ಯಾಯಾಮಗಳಿಗೆ ಸಾಕಷ್ಟು ಸಮಯವನ್ನು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
10. ಟ್ಯಾನ್ ಆಗುವುದನ್ನು ತಪ್ಪಿಸಿ ಮತ್ತು ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ - ಬೀಚ್ ನಿಮಗೆ ವಿಶ್ರಾಂತಿ ಮತ್ತು ವಿನೋದ ಎರಡನ್ನೂ ನೀಡುತ್ತದೆ. ಆದರೆ ಅದರಿಂದ ಬರುವ ಅನಾರೋಗ್ಯಕರ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳಬೇಕು. ನಿಮ್ಮ ಚರ್ಮವು ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದೆ ಎಂದು 2-3 ಗಂಟೆಗಳಿಗೊಮ್ಮೆ ಖಚಿತಪಡಿಸಿಕೊಳ್ಳಿ ಮತ್ತು ಸನ್‌ಸ್ಕ್ರೀನ್ ಲೋಷನ್ ಅನ್ನು ಮತ್ತೆ ಹಚ್ಚಿಕೊಳ್ಳಿ. ನೀವು ಬಳಸುತ್ತಿರುವ ಲೋಷನ್ ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಸ್ವಲ್ಪ ಪ್ರಮಾಣದ ಚರ್ಮದ ಬಣ್ಣವನ್ನು ಕಾಪಾಡಿಕೊಳ್ಳಲು ಚರ್ಮದ ಕ್ಯಾನ್ಸರ್ ನಂತಹ ಅಪಾಯವನ್ನು ಆಹ್ವಾನಿಸಲಾಗುವುದಿಲ್ಲ.
 
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಜೀವನವಿಧಾನವನ್ನೂ ಸಹ ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಉತ್ತಮ ಹವ್ಯಾಸಗಳನ್ನು, ಆಹಾರ ಪದ್ಧತಿಗಳನ್ನು ರೂಢಿಸಿಕೊಂಡು ದೇಹದ ಸ್ವಾಸ್ತ್ಯವನ್ನು ಉತ್ತಮವಾಗಿಟ್ಟುಕೊಂಡರೆ ಅದು ನಿಮ್ಮ ಓದಿಗೆ ದೀರ್ಘಾವಧಿಯಲ್ಲಿ ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ