ತಂಪು ಪಾನೀಯಗಳನ್ನು ಸೇವಿಸಲು ಕಾರಣಗಳೇ ಬೇಕೆಂದೇನಿಲ್ಲ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನಾವು ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ ದೇಹಕ್ಕೆ ನೈಸರ್ಗಿಕವಾದ ಪಾನೀಯಗಳಾದ ಎಳನೀರು, ಲಿಂಬು ಶರಬತ್, ಕಬ್ಬಿನ ಹಾಲು ಇವೆಲ್ಲ ದಣಿದ ದೇಹಕ್ಕೆ ಶಕ್ತಿ ನೀಡುತ್ತದೆ. ಕಬ್ಬಿನ ಹಾಲು ಉಷ್ಣ ಸ್ವಭಾವದ್ದಾದರೂ ಬೇಸಿಗೆ ಕಾಲದಲ್ಲಷ್ಟೇ ಅಲ್ಲದೇ ಉಳಿದ ದಿನಗಳಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ.
* ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಆ ಹಾಲಿನ ಸೇವನೆಯಿಂದಾಗಿ ದೇಹವು ಕೂಡಲೇ ಸಮಸ್ಥಿತಿಗೆ ಬಂದು ಉರಿಯು ಶಮನವಾಗಿ ಚೈತನ್ಯವು ವೃದ್ಧಿಯಾಗುತ್ತದೆ.
* ಕಬ್ಬಿನ ಹಾಲಿನಲ್ಲಿ ನಾರಿನಂಶ ಮತ್ತು ನೈಸರ್ಗಿಕ ಸಕ್ಕರೆ ಇದ್ದು ಇದು ಕೃತಕ ಸಿಹಿಕಾರಕಗಳು ಮತ್ತು ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರಲು ಸಹಾಯ ಮಾಡುತ್ತದೆ.
* ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ ಪ್ರಮಾಣ ಕಡಿಮೆಯಾಗುತ್ತದೆ.
* ಕಬ್ಬಿನ ಹಾಲು ಪಿತ್ತನಾಶಕ ಮತ್ತು ಹೃದಯಕ್ಕೆ ಹಿತಕಾರಿ.
* ಕಬ್ಬಿನ ಹಾಲಿನ ಸೇವನೆಯು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆ.
* ಕಬ್ಬಿನ ಹಾಲಿನ ಸೇವನೆಯು ದೇಹದ ತೂಕವನ್ನು ನೈಸರ್ಗಿಕವಾಗಿ ಮತ್ತು ಸುರಕ್ಷಿತವಾಗಿ ಇಳಿಸುವಲ್ಲಿ ಸಹಾಯ ಮಾಡುತ್ತದೆ.
* ಕಬ್ಬಿನ ಹಾಲು ದೇಹದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಬಿಳಿರಕ್ತಕಣಗಳು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಮತ್ತು ತನ್ಮೂಲಕ ಚರ್ಮದಡಿಯಲ್ಲಿ ಸಂಗ್ರಹಗೊಂಡಿದ್ದ ಸೋಂಕುಗಳನ್ನು ನಿವಾರಿಸಿ ಮೊಡವೆಗಳನ್ನು ಇಲ್ಲವಾಗಿಸುತ್ತದೆ.
* ಕಬ್ಬಿನ ಹಾಲು ಹೆಚ್ಚು ಕ್ಷಾರೀಯವಾಗಿದ್ದು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನೈಸರ್ಗಿಕವಾಗಿ ಕ್ಯಾನ್ಸರ್ ಜೀವಕೋಶಗಳನ್ನು ಕಡಿಮೆಗೊಳಿಸಬಹುದು.
* ಕಬ್ಬಿನ ಹಾಲಿಗೆ ಎಳನೀರು ಬೆರೆಸಿ ಸೇವಿಸುವುದರಿಂದ ಅಸಿಡಿಟಿ ಮತ್ತು ಅರಿಶಿನ ಕಾಮಾಲೆ ರೋಗವು ಕಡಿಮೆಯಾಗುತ್ತದೆ.
* ಕಬ್ಬಿನಹಾಲಿನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ದೇಹದ ಪೋಷಕಾಂಶಗಳ ಕೊರತೆ ನೀಗುತ್ತದೆ.
* ಕಬ್ಬಿನಹಾಲನ್ನು ಸೇವಿಸುವುದರಿಂದ ಇದರಲ್ಲಿರುವ ಪ್ರೋಟೀನ್‌ಗಳು ಘಾಸಿಗೊಂಡಿದ್ದ ಜೀವಕೋಶಗಳನ್ನು ಪುನರ್ಜೀವಗೊಳಿಸಲು ನೆರವಾಗುತ್ತವೆ.
* ಕಬ್ಬಿನ ಹಾಲಿಗೆ ಶುಂಠಿ ಲಿಂಬು ಬೆರೆಸಿ ಸೇವಿಸುವುದರಿಂದ ಇದು ಜೀರ್ಣಶಕ್ತಿಯನ್ನು ವೃದ್ಧಿಸಿ ಹೊಟ್ಟೆ ಉಬ್ಬರ ಇತ್ಯಾದಿಗಳನ್ನು ಹೋಗಲಾಡಿಸುತ್ತದೆ.
* ಕಬ್ಬಿನಹಾಲಿನ ಮೂತ್ರವರ್ಧಕ ಗುಣದಿಂದಾಗಿ, ಮೂತ್ರಪಿಂಡ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿ, ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ಮತ್ತು ಬೆಳವಣಿಗೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
* ಕಬ್ಬಿನ ಹಾಲಿನಲ್ಲಿರುವ ಆಲ್ಕಲೈನ್ ಎಂಬ ಅಂಶವು ಬ್ರೆಸ್ಟ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
* ಒಂದು ವೇಳೆ ಅಜೀರ್ಣತೆ ತೊಂದರೆ ಇದ್ದರೆ ಈ ವ್ಯಕ್ತಿಗಳು ನಿತ್ಯವೂ ಕಬ್ಬಿನ ಹಾಲು ತಪ್ಪದೆ ಸೇವಿಸಬೇಕು. ಇದರ ವಿರೇಚಕ ಗುಣ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯೂತ ನಿವಾರಿಸಿ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯ ಸೆಡೆತಗಳಿಂದ ರಕ್ಷಣೆ ಒದಗಿಸುತ್ತದೆ.
* ಕಬ್ಬಿನಹಾಲು ಹಲ್ಲಿನ ಕುಳಿಗಳ ವಿರುದ್ಧ ಹೋರಾಡಿ, ಹಲ್ಲುಗಳ ಆರೋಗ್ಯ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
* ಮಲಗುವ ಮುನ್ನ ಒಂದು ಲೋಟ ಕಬ್ಬಿನಹಾಲು ಸೇವಿಸುವುದರಿಂದ ನಿದ್ರಾಹೀನತೆ ಮತ್ತು ದೇಹದ ಒತ್ತಡವನ್ನು ನಿವಾರಿಸುತ್ತದೆ.
* ಕಬ್ಬಿನಹಾಲಿನಲ್ಲಿರುವ ಪೊಟ್ಯಾಸಿಯಂ ನಿಮ್ಮ ದೇಹದಲ್ಲಿ ರಕ್ತ ಸಾಮಾನ್ಯವಾಗಿ ಹರಿಯುವಂತೆ ಮಾಡಿ, ಅಭಿಧಮನಿ ಮತ್ತು ರಕ್ತನಾಳಗಳ ಮೇಲಿನ ಹೆಚ್ಚಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದರಿಂದ ನಿಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಕಿಡ್ನಿಯಲ್ಲಿ ಕಲ್ಲಿದ್ದವರು ಪ್ರತಿದಿನ ಕಬ್ಬಿನಹಾಲನ್ನು ಕುಡಿದರೆ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ.