ಅನಾನಸ್ ಹಣ್ಣಿನಿಂದಾಗುವ ಆರೋಗ್ಯ ಪ್ರಯೋಜನಗಳು

ಸೋಮವಾರ, 8 ಅಕ್ಟೋಬರ್ 2018 (15:45 IST)
ಹಣ್ಣುಗಳು ಎಂಥವರಿಗಾದರೂ ಇಷ್ಚವಾಗುತ್ತವೆ. ಅದರಲ್ಲಿಯೂ ಒಳಗಡೆ ರಸಭರಿತ ತಿರುಳಿನೊಂದಿಗೆ, ಸುವಾಸನೆ ಮತ್ತು ಸಿಹಿ ರುಚಿಯನ್ನು ಹೊಂದಿರುವ ಅನಾನಸ್ ಹಣ್ಣು ನಮ್ಮ ದೇಹಕ್ಕೆ ಲಭ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅನಾನಸ್ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದರೂ  ಖನಿಜಾಂಶಗಳು ಮತ್ತು ವಿಟಾಮಿನ್‌ಗಳು ಹೇರಳವಾಗಿರುತ್ತವೆ.
-  ಅನಾನಸ್‌ನಲ್ಲಿ ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ಫ್ರುಟ್ಕೋಸ್ ಮತ್ತು ಗ್ಲುಕೋಸ್‌ಗಳಂತಹ ನೈಸರ್ಗಿಕವಾದ ಸಕ್ಕರೆ ಅಂಶಗಳಿವೆ.
 
- ಅನಾನಸ್‌ನಲ್ಲಿ ಅಮೈನೋ ಆಮ್ಲಗಳು ಮತ್ತು ವಿಟಾಮಿನ್ ಸ್ ಇರುವುದರಿಂದ ತ್ವಚೆಯನ್ನು ಸುಂದರಗೊಳಿಸುವುದಲ್ಲದೇ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.
 
- ಊಟದ ನಂತರ ಅನಾನಸ್‌ಗೆ ಸ್ವಲ್ಪ ಉಪ್ಪು, ಕರಿಮೆಣಸಿನಪುಡಿಯನ್ನು ಉದುರಿಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಇಲ್ಲವಾಗುತ್ತದೆ. 
 
- ಅನಾನಸ್ ಹಣ್ಣಿನ ರಸವನ್ನು ಸೇವಿಸುವುದರಿಂದ ಉರಿ ಮೂತ್ರದ ಸಮಸ್ಯೆಯು ಶಮನವಾಗುತ್ತದೆ.
 
- ಅನಾನಸ್ ಹಣ್ಣಿನ ಆಧ್ರೀಕರಿಸುವ ಮತ್ತು ಪೋಷಿಸುವ ಗುಣದಿಂದಾಗಿ ಒಣಗಿದ ಮತ್ತು ಒಡೆದಿರುವ ತುಟಿಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ.
 
- ಅನಾನಸ್‌ನಲ್ಲಿರುವ ರೋಗ-ಹೋರಾಟ ಉತ್ಕರ್ಷಣ ನಿರೋಧಕ ಗುಣಗಳು ಡಯಾಬಿಟೀಸ್ ಮತ್ತು ಹೃದಯ ಸಂಬಂಧಿ ರೋಗಗಳು ಬರುವ ಸಾಧ್ಯತೆಯನ್ನು ಹೇರಳವಾಗಿ ಕಡಿಮೆ ಮಾಡುತ್ತದೆ.
 
- ಅರಿಶಿನ ಕಾಮಾಲೆಗೆ ಅನಾನಸ್ ಹಣ್ಣುಗಳನ್ನು ಜೇನುತುಪ್ಪದಲ್ಲಿ ನೆನಹಾಕಿ ದಿನಕ್ಕೆ ಎರಡು ಸಲ ತಿನ್ನುವುದರಿಂದ ಖಾಯಿಲೆ ಸ್ವಲ್ಪ ಪ್ರಮಾಣದಲ್ಲಿ ವಾಸಿಯಾಗುತ್ತದೆ.
 
- ಕಾಳುಮೆಣಸಿನಪುಡಿ ಹಾಕಿ ಅನಾನಸ್ ಸೇವಿಸುವುದರಿಂದ ಕೆಮ್ಮು, ಕಫ ಕಡಿಮೆಯಾಗುತ್ತದೆ.
 
- ಹೊಟ್ಟೆ ತೊಳೆಸುವುದು, ಮೂಲವ್ಯಾಧಿ ಹಾಗೂ ತಲೆ ಸುತ್ತುವುದು ಇದ್ದರೆ ಅನಾನಸ್ ಹಣ್ಣಿನ ರಸದ ಜೊತೆ ಕಾಳುಮೆಣಸಿನ ಪುಡಿ, ಅಡುಗೆ ಉಪ್ಪು ಬೆರೆಸಿ ಕುಡಿದರೆ ಶಮನವಾಗುವುದು.
 
- ಕಜ್ಜಿ, ತುರುಕೆ, ಗುಪ್ತರೋಗಗಳ ಜಾಗಕ್ಕೆ ಅನಾನಸ್ ಹಣ್ಣಿನ ರಸ ಹಚ್ಚುವುದರಿಂದ ವಾಸಿಯಾಗುತ್ತದೆ.
 
- ಅನಾನಸ್ ಹಣ್ಣಿನ ಸೇವನೆಯಿಂದ ಕೂದಲುದುರುವಿಕೆಯ ಸಮಸ್ಯೆಯನ್ನು ನಿವಾರಿಸಬಹುದು.
 
- ಅನಾನಸ್‌ನಲ್ಲಿ ಆಂಟಿಯೋಕ್ಸಿಡೇಟಿವ್ ಕಿಣ್ವಗಳು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ನೆತ್ತಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುತ್ತದೆ.
 
- ಅನಾನಾಸ್ ಹಣ್ಣನ್ನು ಬಳಸುವುದರಿಂದ ಹಲ್ಲುಗಳು ಮತ್ತು ಒಸಡುಗಳು ಬಲಿಷ್ಠಗೊಳ್ಳುತ್ತವೆ.
 
- ಗರ್ಭಾವಸ್ಥೆಯಲ್ಲಿ ಅನಾನಸ್ ಹಣ್ಣನ್ನು ಸೇವಿಸುವುದರಿಂದ ತಾಯಿ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣಿನಲ್ಲಿರುವ ಪೊಟ್ಯಾಸಿಯಂ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
 
- ಅನಾನಸ್ ಹಣ್ಣಿನಲ್ಲಿರುವ ಜೀರ್ಣಕಾರಿ ಕಿಣ್ವ ಬ್ರೊಮೆಲೈನ್ ಕರುಳಿನಲ್ಲಿರುವ ಪರಾವಲಂಬಿ ಹುಳಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
 
- ಅನಾಮಸ್ ಹಣ್ಣಿನಲ್ಲಿರುವ ಬ್ರೊಮಲೈನ್, ವಿಟಾಮಿನ್ ಸಿ ಮತ್ತು ನಾರಿನಂಶವು ದೇಹದಲ್ಲಿ ಜೀರ್ಣಕ್ರಿಯಯನ್ನು ಉತ್ತೇಜಿಸುತ್ತದೆ.
 
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅನಾನಸ್ ಹಣ್ಣು ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ