ಮಹಿಳೆಯರ ಬಿಳಿ ಮುಟ್ಟು ಸಮಸ್ಯೆಗೆ ಇಲ್ಲಿದೆ ಪವರ್ ಪುಲ್ ಮನೆಮದ್ದು
ಭಾನುವಾರ, 25 ನವೆಂಬರ್ 2018 (07:06 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೂ ಬಿಳಿ ಮುಟ್ಟಿನ ಸಮಸ್ಯೆ ಇರುತ್ತೆ. ಆದರೆ ಕೆಲವರಿಗೆ ಇದು ಅಧಿಕವಾಗಿರುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.
ಬೆಟ್ಟದ ನೆಲ್ಲಿಕಾಯಿ ಪೇಸ್ಟ್ ಮಾಡಿಕೊಂಡು ಅದರಲ್ಲಿ 1 ಟೀ ಸ್ಪೂನ್ ಪೇಸ್ಟ್ ತೆಗೆದುಕೊಂಡು ಅದಕ್ಕೆ 1ಟೀ ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 2 ಹೊತ್ತು ತಿನ್ನಬೇಕು. ಇದನ್ನು ಒಂದು ತಿಂಗಳು ಮಾಡಬೇಕು.
ಬೆಳ‍್ಳುಳ್ಳಿ ಎಸಳು 4, ಕಾಳುಮೆಣಸು 3 ತೆಗೆದುಕೊಂಡು ಚೆನ್ನಾಗಿ ಜಜ್ಜಿ ತಿನ್ನಬೇಕು ನಂತರ 1 ಗ್ಲಾಸ್ ಬಿಸಿ ನೀರು ಕುಡಿಯಬೇಕು. ಇದನ್ನು ದಿನಕ್ಕೆ 1 ಬಾರಿಯಂತೆ 1 ತಿಂಗಳು ಮಾಡಬೇಕು.
ಅಲೋವೇರಾ ಜೆಲ್ 2 ಟೀ ಸ್ಪೂನ್, ಜೇನು ತುಪ್ಪ 2 ಟೀ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಬೇಕು. ಇದನ್ನು ದಿನಕ್ಕೆ 1 ಬಾರಿಯಂತೆ 1 ತಿಂಗಳು ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ