ಉಪ್ಪು ಹೆಚ್ಚು ತಿಂದ ಮೇಲೆ ಹೃದಯಾಘಾತವೂ ಆಗಲೇ ಬೇಕು!

ಸೋಮವಾರ, 6 ಮಾರ್ಚ್ 2017 (10:33 IST)
ನವದೆಹಲಿ: ಉಪ್ಪು ತಿಂದರೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿದೆ. ಆದರೆ ಹೊಸ ಸಂಶೋಧನೆ ಪ್ರಕಾರ ನೀರು ಕುಡಿಯುವುದು ಮಾತ್ರವಲ್ಲ, ಉಪ್ಪು ಹೆಚ್ಚು ತಿಂದರೆ ಹೃದಯಕ್ಕೇ ಅಪಾಯ ಎಂದು ತಿಳಿದುಬಂದಿದೆ.


ಉಪ್ಪಿಗಿಂತ ರುಚಿಯಿಲ್ಲ ಎನ್ನುವುದೇನೋ ನಿಜ. ಆದರೆ ನಿಯಂತ್ರಣವಿಲ್ಲದೇ ಸಿಕ್ಕಾಪಟ್ಟೆ ಉಪ್ಪು ಸೇವಿಸಿದರೆ, ಹೃದಯಾಘಾವತಾಗುವ ಸಂಭವ ಹೆಚ್ಚು ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಪ್ರಕಾರ ಪ್ರತೀ ದಿನ ಒಬ್ಬ ವ್ಯಕ್ತಿ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬಾರದಂತೆ.

ಇದೀಗ ಕೆನಡಾ ಸಂಶೋಧಕರು ನಡೆಸಿದ ಸಂಶೋಧನೆಯೂ ಇದನ್ನೇ ಪುಷ್ಠೀಕರಿಸಿದೆ. ಉಪ್ಪು ಹೆಚ್ಚು ಸೇವಿಸುವುದರಿಂದ ದೇಹದ ಸಮತೋಲನ ತಪ್ಪುತ್ತದೆ ಎನ್ನುವುದು ಸಂಶೋಧಕರ ವಾದ. ಸೋಡಿಯಂ ಅಂಶ ದೇಹದಲ್ಲಿ ಹೆಚ್ಚಾದರೂ ಅಪಾಯ ಹೆಚ್ಚು. ಒಬ್ಬ ವ್ಯಕ್ತಿಯ ದೇಹದಲ್ಲಿ ಒಂದು ದಿನದಲ್ಲಿ ಸೋಡಿಯಂ ಅಂಶ 2.7 ಗ್ರಾಂಗಿಂತ ಹೆಚ್ಚು ಇರಬಾರದು ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ