ಪದೇ ಪದೇ ಉಂಟಾಗುವ ಶೀತದ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಭಾನುವಾರ, 15 ಸೆಪ್ಟಂಬರ್ 2019 (06:54 IST)
ಬೆಂಗಳೂರು : ವಾತಾವರಣ ಬದಲಾದಂತೆ ಶೀತ, ಕಫದ ಸಮಸ್ಯೆ ಎದುರಾಗುತ್ತದೆ. ಈ ರೀತಿ ನಮಗೆ ಪದೇ ಪದೇ ಉಂಟಾಗುವ ಅಲರ್ಜಿಯಿಂದ ಶೀತವಾಗುತ್ತಿದ್ದರೆ ಈ ಮನೆ ಮದ್ದನ್ನು ದಿನಾ ಸೇವಿಸುತ್ತಾ ಬನ್ನಿ. ಇದರಿಂದ  ಶೀತದ ಸಮಸ್ಯೆ ದೂರವಾಗುತ್ತದೆ.




ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಇದನ್ನು ಒಂದು ಬೆಚ್ಚನೆಯ ಬಾಟಲಿಯಲ್ಲಿ ತುಂಬಿಡಿ. ಇದನ್ನು ಪ್ರತಿದಿನ ಸೇವಿಸಿ. ಇದರಿಂದ ಗಂಟಲು ಕೆರೆತ, ಕೆಮ್ಮು ಮುಂತಾದ ಸಮಸ್ಯೆಗಳು ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ