ನೆಗಡಿ, ಕೆಮ್ಮು, ಗಂಟಲು ನೋವೇ...? ಇಲ್ಲಿದೆ ಪರಿಹಾರ

ಶುಕ್ರವಾರ, 7 ಜುಲೈ 2017 (14:30 IST)
ಬೆಂಗಳೂರು: ಮಳೆಗಾಲ ಆರಂಭವಾಯಿತು ಎಂದರೆ ಒಂದಲ್ಲ ಒಂದು ರೀತಿಯ ಅನಾರೋಗ್ಯ ಆರಂಭವಾಗುತ್ತಲೇ ಇರುತ್ತದೆ. ನೆಗಡಿ, ಕೆಮ್ಮು, ಕಫ ದಂತಹ ಸಮಸ್ಯೆಗಳಂತು ಸರ್ವೇ ಸಾಮಾನ್ಯ. ಆದರೆ ಇಂತಹ ಸಮಸ್ಯೆಗಳಿಗೆ ಹೆಚ್ಚು ಮಾತ್ರೆ, ಔಷಧಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದಕ್ಕಾಗಿ ನೀವು ಆಸ್ಪತ್ರೆಗಳಿಗೆ ಅಲೆದಾಡಬೇಕಾಗಿಲ್ಲ. ನಿಮ್ಮ ಅಂಗೈಯಲ್ಲೇ ಇದೆ ಔಷಧಿ. 
 
ಶುಂಠಿ ಪೆಪ್ಪರ್ ಕಷಾಯ:
 
ಒಂದು ಪಾತ್ರೆಯಲ್ಲಿ 1 1/2 ಗ್ಲಾಸಿನಷ್ಟು ನೀರು ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಪೆಪ್ಪರ್ ಹಾಕಿ 10 ನಿಮಿಷಗಳ ಕಾಲ ಮುಚ್ಚಿಟ್ಟು ಕುದಿಸಿ. ಹೀಗೆ ಕುದಿಸಿದ ಕಷಾಯದ ನೀರನ್ನು ಸ್ವಲ್ಪ ಆರಲು ಬಿಟ್ಟು ಬಳಿಕ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಬಿಸಿ ಬಿಸಿಯಾಗಿ ಕುಡಿಯಿರಿ. ಹೀಗೆ ದಿನಕ್ಕೆ ಎರಡುಬಾರಿ ಮಾಡುವುದರಿಂದ ನೆಗಡಿ ಕೆಮ್ಮು ,ಅಕ್ಫ ನಿವಾರಣೆಯಾಗುತ್ತದೆ.
 
ದಾಲ್ಚಿನ್ನಿ ಕಷಾಯ:
ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು 1 ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ವಾಸಿಯಾಗುತ್ತದೆ.
 
ಹಾಲು-ಅರಿಷಿಣ ಕಷಾಯ:
ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ ಕುಡಿದರೆ ನೆಗಡಿ, ಕೆಮ್ಮು, ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.
 
ಓಮಕಾಳು ಕಷಾಯ
ಓಮ ಕಾಳು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರೂ ಸಾರಿ ಕುಡಿದರೆ ಕಫಾ ನಿವಾರಣೆಯಗುತದೆ.
 
ಲೇಹ:
ಕಾಳು ಮೆಣಸನ್ನು ಹುರಿದು ನುಣ್ಣಗೆ ಪುಡಿಮಾಡಿ ಕಾಲು ಚಮಚ ಪುಡಿಯನ್ನು ಜೇನುತುಪ್ಪ ದಲ್ಲಿ ಕಲಸಿ ದಿನಕ್ಕೆ 2 ಸಲ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಗುಣವಾಗುತ್ತದೆ.
 
ಲೇಹ:
ಅರಿಶಿಣದ ಪುಡಿ ಮತ್ತು ಬೆಲ್ಲವನ್ನು ಸ್ವಲ್ಪ ಹಾಲಿನೊಂದಿಗೆ ಕಲಸಿ ಗಂಟಲಿನ ಮೇಲ್ಭಾಗಕ್ಕೆ ಹಚ್ಹುವದರಿಂದ ಶೀತದ ಗಂಟಲು ನೋವು ನಿವಾರಣೆಯಾಗುತ್ತದೆ.
 

ವೆಬ್ದುನಿಯಾವನ್ನು ಓದಿ