ಮಲಬದ್ಧತೆಗೆ ಮನೆಯಲ್ಲೇ ಪರಿಹಾರ

ಗುರುವಾರ, 8 ಜೂನ್ 2017 (10:48 IST)
ಬೆಂಗಳೂರು: ಇಂದಿನ ಜೀವನ ಶೈಲಿ, ಆಹಾರ ಶೈಲಿಯ ಪ್ರಭಾವದಿಂದಾಗಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಯೆಂದರೆ ಮಲಬದ್ಧತೆ. ಇದಕ್ಕೆ ಪರಿಹಾರವೇನು? ನೋಡೋಣ.

 
ನಾರಿನಂಶ ಹೆಚ್ಚು ಸೇವಿಸದೇ ಇರುವುದು, ದೈಹಿಕ ವ್ಯಾಯಾಮದ ಕೊರತೆ, ಜಿಡ್ಡು ಪದಾರ್ಥಗಳ ಸೇವನೆ ಮುಂತಾದವುಗಳು ಮಲಬದ್ಧತೆಗೆ ಕಾರಣವಾಗುತ್ತದೆ. ಇದನ್ನು ನಾವು ತಿನ್ನುವ ಆಹಾರದಲ್ಲೇ ನಿಯಂತ್ರಿಸಬಹುದು. ಯಾವೆಲ್ಲಾ ಆಹಾರಗಳು ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ ನೋಡೋಣ.

ಕಿವಿ ಹಣ್ಣು
ಕಿವಿ ಫ್ರೂಟ್ಸ್ ಕೊಂಚ ದುಬಾರಿ ಎನಿಸಿದರೂ ಇದು ಸಾಕಷ್ಟು ನಾರಿನ ಅಂಶ ಇರುವ ಹಣ್ಣು. ಇದು ನಮ್ಮ ಮಲ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ.

ಅಂಜೂರ
ಅಂಜೂರ ಒಣ ಅಥವಾ ಫ್ರೆಶ್ ತಿನ್ನುವುದು ಉತ್ತಮ. ಇಲ್ಲವೇ ರಾತ್ರಿ ಮಲಗುವ ಮೊದಲು ಹಾಲಿನ ಜತೆಗೆ ಒಣ ಅಂಜೂರ ಸೇರಿಸಿ ತಿನ್ನಿ.

ಮ್ಯಾಗ್ನಿಶಿಯಂ ಅಂಶದ ಆಹಾರಗಳು
ಆಹಾರದಲ್ಲಿ ಸಾಕಷ್ಟು ಮ್ಯಾಗ್ನಿಶಿಯಂ ಅಂಶವಿರುವಂತೆ ನೋಡಿಕೊಳ್ಳಿ. ಇಡೀ ಧಾನ್ಯಗಳು, ಸೊಪ್ಪು ತರಕಾರಿಗಳನ್ನು ಆದಷ್ಟು ಸೇವಿಸಿ. ಒಂದು ವೇಳೆ ನಿಮಗೆ ಕಿಡ್ನಿ ಸಂಬಂಧಿ ಖಾಯಿಲೆಗಳಿದ್ದರೆ, ಇಂತಹ ಆಹಾರ  ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಓಟ್ಸ್ ತಿನ್ನಿ
ಮಧುಮೇಹ ಇರುವವರಿಗೆ ಮಾತ್ರವಲ್ಲ, ಮಲಬದ್ಧತೆ ಇದ್ದವರೂ ಓಟ್ಸ್ ಹೇರಳವಾಗಿ ಸೇವಿಸಬಹುದು. ಇದು ಗೋಧಿಯಿಂದ ಮಾಡಿದ ಆಹಾರ ಪದಾರ್ಥವಾಗಿರುವುದರಿಂದ ಸಾಕಷ್ಟು ನಾರಿನಂಶ ಸಿಗುತ್ತದೆ.

ಕೊಬ್ಬರಿ ಎಣ್ಣೆ
ಪ್ರತಿ ದಿನ ಕನಿಷ್ಟ ಎರಡು ಚಮಚ ಕೊಬ್ಬರಿ ಎಣ್ಣೆ ಸೇವಿಸುವುದೂ ಆರೋಗ್ಯಕ್ಕೆ ಉತ್ತಮ. ಇದು ಮಲವಿಸರ್ಜನೆಯನ್ನು ಸುಗಮಗೊಳಿಸುತ್ತದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ