ಬೆಳ್ಳಂ ಬೆಳಿಗ್ಗೆ ಟೀ ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ?!

ಶನಿವಾರ, 22 ಏಪ್ರಿಲ್ 2017 (07:40 IST)
ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವ ಅಭ್ಯಾಸವಿದೆ. ಆದರೆ ಇದು ನಿಜವಾಗಿಯೂ ಆರೋಗ್ಯಕರ ಅಭ್ಯಾಸವೇ? ಅಲ್ಲ ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಬೆಳಿಗ್ಗೆಯೇ ಚಹಾ ಕುಡಿಯುವುದರಿಂದ ಆರೋಗ್ಯ ಮೇಲಾಗುವ ಪರಿಣಾಮಗಳು ಯಾವುವು? ನೋಡೋಣ.

 
ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಆರೋಗ್ಯದ ಮೇಲೆ ಈ ಪರಿಣಾಮಗಳು ಆಗಬಹುದು.

1. ಜಿರ್ಣ ಪ್ರಕ್ರಿಯೆಯನ್ನು ಅಡಿಮೇಲು ಮಾಡಬಹುದು.
2.  ದೇಹವನ್ನು ನಿರ್ಜಲೀಕರಣಕ್ಕೆ ದೂಡಬಹುದು.
3. ಮೌಖಿಕ ಆರೋಗ್ಯವನ್ನು ಹಾಳು ಮಾಡಬಹುದು.
4. ಕೆಫೈನ್ ಅಂಶ ದೇಹ ಸೇರುವುದರಿಂದ ತಲೆ ಸುತ್ತ, ವಾಕರಿಕೆಯಂತಹ ಅಡ್ಡ ಪರಿಣಾಮಗಳಾಗಬಹುದು.

ಹಾಗಿದ್ದರೆ ಬೆಳ್ಳಂ ಬೆಳಿಗ್ಗೆ ಏನು ಕುಡಿಯಬೇಕು? ಚಹಾ ಬದಲು, ಹಾಲು, ಹದ ಬಿಸಿ ನೀರು, ನಿಂಬೆ ಪಾನಕ ಅಥವಾ ಹಣ್ಣಿನ ಜ್ಯೂಸ್, ಮೆಂತೆ ಜ್ಯೂಸ್ ಸೇವನೆ ಮೂಲಕ ದಿನ ಆರಂಬಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ