ಗರ್ಭಿಣಿಯರು ದಿನಕ್ಕೆ ಎಷ್ಟು ಗ್ಲಾಸ್ ಹಾಲು ಕುಡಿಯಬಹುದು

Krishnaveni K

ಸೋಮವಾರ, 12 ಆಗಸ್ಟ್ 2024 (11:35 IST)
ಬೆಂಗಳೂರು: ಗರ್ಭಿಣಿಯರು ಆರೋಗ್ಯವಾಗಿರಲು ಪ್ರತಿನಿತ್ಯ ಹಾಲು ಸೇವನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪ್ರತಿನಿತ್ಯ ಎಷ್ಟು ಗ್ಲಾಸ್ ಹಾಲು ಕುಡಿದರೆ ಸೂಕ್ತ ಗೊತ್ತಾ? ಇಲ್ಲಿ ನೋಡಿ.

ಹಾಲಿನಲ್ಲಿಕ್ಯಾಲ್ಶಿಯಂ ಹೇರಳವಾಗಿದ್ದು, ಮಗುವಿನ ಬೆಳವಣಿಗೆಗೆ ಮತ್ತು ತಾಯಿ ಗಟ್ಟುಮುಟ್ಟಾಗಿರಬೇಕಾದರೆ ಹಾಲು ಸೇವನೆ ಮಾಡಬೇಕು ಎಂದು ಎಲ್ಲರೂ ಸಲಹೆ ನೀಡುತ್ತಾರೆ. ಇದಕ್ಕೆ ಮೊದಲು ಗರ್ಭಿಣಿಯರು ಹಾಲು ಸೇವನೆ ಮಾಡುವುದು ಯಾಕೆ ಎಂಬುದನ್ನೂ ತಿಳಿದುಕೊಳ್ಳಿ.

ಗರ್ಭಾವಸ್ಥೆಯಲ್ಲಿ ತಾಯಿಗೆ ಮತ್ತು ಮಗುವಿಗೆ ಕ್ಯಾಲ್ಶಿಯಂ ಅಂಶ ಸಾಕಷ್ಟು ಬೇಕಾಗುತ್ತದೆ. ಕ್ಯಾಲ್ಶಿಯಂ ಅಂಶ ಒದಗಿಸುವ ಅತ್ಯಂತ ಪ್ರಬಲ ಮೂಲವೆಂದರೆ ಹಾಲು. ಹೀಗಾಗಿ ಹಾಲು ಸೇವನೆ ಮಾಡುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ವೈದ್ಯರೂ ಸಲಹೆ ನೀಡುತ್ತಾರೆ.

ಗರ್ಭಿಣಿ ಸ್ತ್ರೀಯರು ಪ್ರತಿನಿತ್ಯ ಎರಡು ಅಥವಾ ಮೂರು ಕಪ್ ಹಾಲು ಸೇವನೆ ಮಾಡಬಹುದು.  ಹಾಲು ಸೇವನೆ ಮಾಡುವುದರಿಂದ ವಿಟಮಿನ್ ಡಿ, ಕ್ಯಾಲ್ಶಿಯಂ ಅಂಶ ಹೇರಳವಾಗಿ ದೊರಕುವುದಲ್ಲದೆ, ಗರ್ಭಾವಸ್ಥೆಯಲ್ಲಿ ಕಂಡುಬರುವ ಅಸಿಡಿಟಿ ಸಮಸ್ಯೆಗೂ ಹಾಲು ಮತ್ತು ಅದರ ಉತ್ಪನ್ನಗಳು ಪರಿಹಾರ ನೀಡುತ್ತದೆ. ಹೀಗಾಗಿ ಗರ್ಭಿಣಿಯರು ತಪ್ಪದೇ ಹಾಲು ಸೇವನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ