ನೈಸರ್ಗಿಕವಾಗಿ ನೀರನ್ನು ಶುದ್ಧಿಕರಿಸುವುದು ಹೇಗೆ ಗೊತ್ತಾ?

ಸೋಮವಾರ, 11 ಮಾರ್ಚ್ 2019 (06:51 IST)
ಬೆಂಗಳೂರು : ನೀರು ಅತಿ ಅಮೂಲ್ಯವಾದ ವಸ್ತು. ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಅಶುದ್ದ ನೀರನ್ನು ಕುಡಿದರೆ ಆರೋಗ್ಯವು ಹಾಳಾಗುತ್ತದೆ. ಆದ್ದರಿಂದ ಕುಡಿಯುವ ನೀರನ್ನು ನೈಸರ್ಗಿಕವಾಗಿ ಶುದ್ಧಕರಿಸಿ ಕುಡಿದರೆ ಅತ್ಯುತ್ತಮ. ಅದು ಹೇಗೆಂಬುದನ್ನು ತಿಳಿದುಕೊಳ್ಳೋಣ.


ಮೊದಲಿಗೆ ನೀರನ್ನು ಒಂದು ಮಣ‍್ಣಿನ ಮಡಿಕೆಯಲ್ಲಿ 8-10 ಗಂಟೆಗಳ ಕಾಲ ಶೇಖರಿಸಿ ಇಟ್ಟುಕೊಳ್ಳಬೇಕು. ಆಗ ಅದರಲ್ಲಿರುವ ಕಲ್ಮಶಗಳು ತಳದಲ್ಲಿ ಉಳಿದುಕೊಳ್ಳುತ್ತವೆ. ನಂತರ ಅದನ್ನು ನಿಧಾನವಾಗಿ ಮತ್ತೊಂದು ಮಡಿಕೆಗೆ ಹಾಕಬೇಕು. ಆದರೆ ತಳದಲ್ಲಿರುವ ಕಲ್ಮಶಗಳನ್ನು ಹಾಕಬಾರದು.


ನಂತರ ಆ ಶುದ್ಧ ನೀರಿಗೆ ತಾಮ್ರದ ಪೀಸ್ ನ್ನು ಹಾಗೂ ಒಣಗಿದ ನುಗ್ಗೆಕಾಯಿ ಬೀಜವನ್ನು ಹಾಕಬೇಕು. ಯಾಕೆಂದರೆ ತಾಮ್ರ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡಿದರೆ, ನುಗ್ಗೆಕಾಯಿ ಬೀಜ ಸತ್ತ ಬ್ಯಾಕ್ಟೀರಿಯಾವನ್ನು ತನ್ನತ್ತ ಸೆಳೆದಿಟ್ಟುಕೊಳ್ಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ