ಸ್ಟೇಜ್ ಫಿಯರ್ ಓಡಿಸಬೇಕಾದರೆ ಹೀಗೆ ಮಾಡಿ

ಬುಧವಾರ, 14 ಡಿಸೆಂಬರ್ 2016 (09:25 IST)
ಬೆಂಗಳೂರು: ಕಚೇರಿಯಲ್ಲಿ ಸಣ್ಣದೊಂದು ಕಾನ್ಫರೆನ್ಸ್. ಸ್ಕೂಲ್ ನಲ್ಲಿ ಪುಟ್ಟ ಕಾರ್ಯಕ್ರಮ. ಆದರೆ ಎಲ್ಲರ ಎದುರು ಮಾತನಾಡಲು ಹೊರಟೆ ನಾಲಿಗೆ ಹೊರಳಲ್ಲ. ಗಂಟಲು ಒಣಗುತ್ತದೆ, ಕಾಲಲ್ಲಿ ಭೂಕಂಪದ ನಡುಕ. ಏನೆಂದು ಕರೆಯುವುದು ಇದನ್ನು. ಇದುವೇ ಸ್ಟೇಜ್ ಫಿಯರ್. ಸಭಾ ಕಂಪನ. ಅದಕ್ಕೆ ಏನು ಮಾಡಬೇಕು?

ವೇದಿಕೆ ಏರುವಾಗ ಉಂಟಾಗುವ ನಡುಕ ನಮ್ಮೊಳಗಿನ ಆತ್ಮವಿಶ್ವಾಸದ ಕೊರತೆಯಷ್ಟೆ. ನಾನು ಮಾಡುವ ಭಾಷಣ, ಹಾಡಿಗೆ ಯಾರಾದರೂ ನಕ್ಕರೆ ಎಂಬ ಸುಳ್ಳು ಆತಂಕ. ಅಸಲಿಗೆ ಹಾಗೆ ಮಾಡುವವರು ಯಾರೂ ಇಲ್ಲ. ವೇದಿಕೆ ಏರುವಾಗ ಇಂತಹ ಕಾಡಿದರೆ ಹೀಗೆ ಮಾಡಿ.

ವೇದಿಕೆ ಏರುವ ಮೊದಲೇ ಚೆನ್ನಾಗಿ ಪ್ರಾಕ್ಟೀಸ್ ಮಾಡಿ. ನಾವು ಹೇಳಬೇಕಾದ ವಿಷಯ ಚೆನ್ನಾಗಿ ಮನನವಾಗಿದ್ದರೆ ಯಾವುದಕ್ಕೂ ಹೆದರಬೇಕಿಲ್ಲ. ಹೊಸ ರೀತಿಯಲ್ಲಿ ಹೇಳುವ ಸರ್ಕಸ್ ಮಾಡುವುದೇನೂ ಬೇಡ.  ಚೆನ್ನಾಗಿ ಬಾಯಿಪಾಠ ಮಾಡಿಕೊಂಡ ಮೇಲೆ ಕನ್ನಡಿ ಎದುರು ಅಥವಾ ನಿಮಗೆ ಪ್ರಿಯರಾದವರ ಎದುರು ನಿಂತು ಒಮ್ಮೆ ಹೇಳಿಕೊಳ್ಳಿ. ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ.

ವೇದಿಕೆಯಲ್ಲಿ ನಿಲ್ಲುವುದೂ ನಿಮಗೆ ಕಂಫರ್ಟ್ ಎನಿಸುವ ಭಂಗಿಯಲ್ಲಿರಲಿ. ನಂತರ ಎದುರಿರುವ ಜನ ಸಮೂಹ ಭಯ ಹುಟ್ಟಿಸುವುದಿದ್ದರೆ, ಒಂದೇ ಕಡೆ ನೋಡುವುದು ಬೇಡ. ನಿಮ್ಮ ದೃಷ್ಟಿ ಅತ್ತಿತ್ತ ಹಾಯಿಸಿ. ಹೇಳುವ ವಿಷಯವನ್ನು ಗಟ್ಟಿಯಾಗಿ ಹೇಳುವುದೂ ಕೂಡಾ ಭಯವನ್ನು ದೂರ ಮಾಡುತ್ತದೆ. ಹಾಗಿದ್ದರೂ ನಿಮ್ಮ ಕೈ ಕಾಲು ಸಣ್ಣಗೆ ನಡುಗುತ್ತಿದ್ದರೆ, ನಿಂತ ಭಂಗಿಯಲ್ಲೇ ನಿಲ್ಲಬೇಡಿ. ಅತ್ತಿತ್ತ ಸರಿಯಿರಿ. ಕೈ ಸನ್ನೆಯೊಂದಿಗೆ ಭಾಷಣ ಮಾಡಿ. ಆಗ ನಿಮಗೆ ನಡುಕವಿದ್ದರೂ ನೋಡುವವರಿಗೆ ನಿಮ್ಮ ನರ್ವಸ್ ನೆಸ್ ಗೊತ್ತಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ