ತೊನ್ನಿನ ನಿವಾರಣಾ ಮಾರ್ಗಗಳೇನು ?

ಸೋಮವಾರ, 15 ಅಕ್ಟೋಬರ್ 2018 (15:47 IST)
ಚರ್ಮ ಅಥವಾ ಕೂದಲಿನ ಯಾವುದೇ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಥದ ಕೊರತೆಯಿಂದಾಗಿ ಬಿಳಿಯಾಗುವ ಅಥವಾ ಬಿಳಿ ಕಲೆಗಳಾಗಿರುವ ಸ್ಥಿತಿಯೇ ತೊನ್ನು. ಮೈ ಮೇಲೆ ಆಗುವ ಇಂತಹ ಬಿಳಿ ಕಲೆಯನ್ನು ಮೆಡಿಕಲ್ ಭಾಷೆಯಲ್ಲಿ ವಿಟಿಲಿಗೊ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಪ್ರಪಂಚದಲ್ಲಿ ಬಹಳ ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಗ್ರಾಮ್ಯ ಭಾಷೆಯಲ್ಲಿ ಬಿಳಿ ಮಚ್ಚೆ ಅಥವಾ ಬಿಳಿ ತೊನ್ನು ಎಂದು ಕರೆಯಲಾಗುತ್ತದೆ. ಆದರೆ ಇದು ಅಂಟು ರೋಗ ಅಥವಾ ಸಾಂಕ್ರಾಮಿಕ ರೋಗವಲ್ಲ. 
* ತೊನ್ನಿನ ಗುಣ ಲಕ್ಷಣಗಳೇನು
 
- 30 ಶೇಖಡಾರಷ್ಟು ಜನರಿಗ ಈ ಸಮಸ್ಯೆಯು ಜೆನೆಟಿಕ್ ಕಾರಣದಿಂದ ಉಂಟಾಗುತ್ತದೆ.
 
- ತಪ್ಪಾದ ಆರೋಗ್ಯ ಕ್ರಮದಿಂದಲೂ ತೊನ್ನಿನ ಸಮಸ್ಯೆ ಉಂಟಾಗುತ್ತದೆ.
 
- ಲಿವರ್ ಸಮಸ್ಯೆಯ ಕಾರಣದಿಂದಾಗಿ ಬಿಳಿ ತೊನ್ನು ಕಾಣಿಸಿಕೊಳ್ಳುತ್ತದೆ.
 
- ಹೊಟ್ಟೆ ಹಾಳಾಗುವುದು ಅಥವಾ ಹೊಟ್ಟೆಯಲ್ಲಿ ಕ್ರಿಮಿ ಅಗುವುದರಿಂದಲೂ ಮೈ ಮೇಲೆ ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತದೆ.
 
- ತ್ವಚೆಯಲ್ಲಿರುವ ವರ್ಣದ್ರವ್ಯ ಕೋಶಗಳ ನಾಶವಾಗುವಿಕೆಯಿಂದ ಇದು ಕಾಣಿಸಿಕೊಳ್ಳುತ್ತದೆ.
 
 * ತೊನ್ನಿನ್ನು ತಡೆಗಟ್ಟುವ ಕ್ರಮಗಳೇನು
- ಸೊರಾಲಿಯಾ ಮತ್ತು ಹುಣಸೆಬೀಜವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು 2 ರಿಂದ 3 ದಿನ ಚೆನ್ನಾಗಿ ನೆನೆಸಿ ಅದರ ಹೊಟ್ಟು ತೆಗೆದು ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಬಿಳಿ ಮಚ್ಚೆಯ ಮೇಲೆ ಲೇಪಿಸಬೇಕು. ಇದರಿಂದ ಯಾವುದೇ ಬಗೆಯ ಚರ್ಮದಲ್ಲಿ ಉಂಟಾಗುವ ಕೆಲವು ಅಲರ್ಜಿ ಅಥವಾ ಸೋಂಕು, ತ್ವಚೆ ಕೆಂಪಾಗುವಿಕೆ, ಬೊಬ್ಬೆ, ಗುಳ್ಳೆ ಎಲ್ಲದಕ್ಕೂ ಪರಿಹಾರ ನೀಡುತ್ತದೆ.
 
- ಬಾವಂಚಿ ಬೀಜಗಳನ್ನು 3 ದಿನಗಳ ಕಾಲ ಶುಂಠಿ ಅಥವಾ ಹುಣಸೆ ನೀರಿನಲ್ಲಿ ನೆನೆಸಿಟ್ಟು ನಂತರ ಆ ಬೀಜದ ಸಿಪ್ಪೆಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ದಿನಕ್ಕೆ 1 ಗ್ರಾಂನಷ್ಟು ಪುಡಿಯನ್ನು ಹಾಲಿನ ಜೊತೆ 40 ದಿನಗಳ ಕಾಲ ಸೇವಿಸಿದರೆ ತೊನ್ನು ಕಡಿಮೆಯಾಗುತ್ತದೆ.
 
-  ಪ್ರಾಥಮಿಕ ಹಂತದಲ್ಲಿಯೇ ಈ ರೋಗವನ್ನು ಉಲ್ಬಣಿಸದಂತೆ ಸ್ಟಿರಾಯಿಡ್, ಟ್ರಾಕ್ರೋಲಿಮಸ್ ಮೊದಲಾದ ಔಷಧಗಳಿಂದಲೂ ಈ ರೋಗವನ್ನು ನಿಯಂತ್ರಿಸಲಾಗುತ್ತದೆ.
 
- ಶಸ್ತ್ರಚಿಕಿತ್ಸೆ ಮೂಲಕ ಅಥವಾ ಚರ್ಮದ ಸೀಳಿಕೆಗಳಿಂದ ಕಸಿ, ನೀರುಗುಳ್ಳೆ ಅಥವಾ ಚರ್ಮದ ಬಿಲ್ಲೆಗಳಿಂದ ಚರ್ಮ ಕಸಿ ಮಾಡಿ ತೊನ್ನನ್ನು ನಿವಾರಣೆ ಮಾಡಬಹುದು.
 
- ಕೆಮ್ಮಣ್ಣನ್ನು ಶುಂಠಿಯ ರಸದ ಜೊತೆಗೆ ಬೆರೆಸಿ ತ್ವಚೆಯ ಮೇಲೆ ದಿನಕ್ಕೆ ಒಂದು ಬಾರಿ ಲೇಪಿಸಬೇಕು. ಇದರಿಂದ ತ್ವಚೆಯಲ್ಲಿರುವ ಪಿಗ್‌ಮೆಂಟೇಶನ್‌ಗೆ ಒಳ್ಳೆಯ ಪ್ರಯೋಜನಗಳು ಲಭಿಸುತ್ತವೆ.
 
- ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬಿಳಿ ಮಚ್ಚೆ ಕಡಿಮೆಯಾಗುವುದು. ಜೊತೆಗೆ ಕಲ್ಲಂಗಡಿ ಹಣ್ಣಿನಬೀಜ, ಶುಂಠಿ ಅಥವಾ ನಟ್ಸ್‌ ಸೇವನೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ. 
 
-ಮೂಲಂಗಿ ಬೀಜಗಳನ್ನು ರಾತ್ರಿ ವಿನೆಗರ್‌ನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ಮಿಶ್ರಣವನ್ನು ಬಿಳಿ ತೊನ್ನುಗಳ ಜಾಗಕ್ಕೆ ಹಚ್ಚಿ 3 ರಿಂದ 4 ಗಂಟೆಗಳ ಕಾಲ ಹಾಗೆಯೇ ಬಿಡುವುದರಿಂದ ತೊನ್ನು ನಿವಾರಣೆಯಾಗುತ್ತದೆ.
 
- ದಿನಕ್ಕೆ 3 ವೀಳ್ಯದೆಲೆಯ ಜೊತೆಗೆ ಸೌತೆಕಾಯಿಯನ್ನು ತಿನ್ನುವುದರಿಂದ ತೊನ್ನು ಕಡಿಮೆಯಾಗುತ್ತದೆ.
 
- ತುಳಸಿ ಎಲೆ ಮತ್ತು ನಿಂಬೆರಸವನ್ನು ಜೊತೆಯಾಗಿ ಸೇರಿಸಿ ತ್ವಚೆಯ ಮೇಲೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
 
- ಜೇಡಿ ಮಣ್ಣಿನಲ್ಲಿ ಕಾಪರ್ ಅಂಶಗಳು ಹೇರಳವಾಗಿರುವುದರಿಂದ ಇದನ್ನು ಶುಂಠಿ ರಸದೊಂದಿಗೆ ಬೆರೆಸಿ ತೊನ್ನಿನ ಜಾಗಕ್ಕೆ ಹಚ್ಚಿದರೆ ರಕ್ತ ಸಂಚಾರ ಅಧಿಕವಾಗಿ ಚರ್ಮದ ಬಣ್ಣ ನೈಜವಾಗುತ್ತದೆ.
 
- ಬೇವಿನ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತೆಗೆದು ಅದಕ್ಕೆ ಜೇನು ಮಿಕ್ಸ್‌ ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸುವುದರಿಂದ ತೊನ್ನು ಕಡಿಮೆಯಾಗುತ್ತದೆ.
 
-ತಾಮ್ರದ ಚೊಂಬಿನಲ್ಲಿ ನೀರು ಕುಡಿಯುತ್ತಿದ್ದರೆ ದೇಹಕ್ಕೆ ಕಾಪರ್ ಅಂಶಗಳು ಹೇರಳವಾಗಿ ದೊರೆಯುವುದರಿಂದ ತೊನ್ನಿನ ಸಮಸ್ಯೆ ಕಡಿಮೆಯಾಗುತ್ತದೆ.
 
- ಸಾಸಿವೆ ಎಣ್ಣೆಗೆ ಅರಿಶಿನ ಪುಡಿ ಮಾಡಿ ಎಫೆಕ್ಟ್‌ ಆದ ಜಾಗಕ್ಕೆ ಹಚ್ಚುತ್ತ ಬಂದರೆ ಆ ಬಣ್ಣ ಬದಲಾಗುತ್ತದೆ. 
 
- ದಿನಕ್ಕೆ ಒಂದು ಬಾರಿ ಬೇವಿನ ರಸವನ್ನು ಕುಡಿಸುವುದರಿಂದ ತೊನ್ನಿನ ಸಮಸ್ಯೆ ನಿವಾರಣೆಯಾಗುತ್ತದೆ.
 
- ವಾಲ್‌ನಟ್‌ ಪುಡಿ ಮಾಡಿ, ಅದಕ್ಕೆ ಸ್ವಲ್ಪ ನೀರು ಬೆರೆಸಿ ದಿನಕ್ಕೆ ಎರಡು ಬಾರಿ ತೊನ್ನಾದ ಜಾಗಕ್ಕೆ ಹಚ್ಚುವುದರಿಂದ ಕಡಿಮೆಯಾಗುತ್ತದೆ.
 
- ಉದ್ದನ್ನು ನೀರಿನಲ್ಲಿ ನೆನೆಸಿ ಪೇಸ್ಟ್ ಮಾಡಿ ಹಚ್ಚುವುದರಿಂದ ತೊನ್ನು ಕಡಿಮೆಯಾಗುತ್ತದೆ.
 
- ಹೆಚ್ಚು ತರಕಾರಿ, ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ವಿಟಾಮಿನ್‌ಗಳು ದೊರೆತು ತೊನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ.
 
- ಒತ್ತಡವನ್ನು ಕಡಿಮೆ ಮಾಡಿಕೊಂಡರೆ ಈ ತೊನ್ನು ಬಹುತೇಕ ಕಡಿಮೆಯಾಗುತ್ತದೆ.
 
- ಸೋಯಾಬಿನ್, ಕಲ್ಲಂಗಡಿ ಬೀಜ, ಕೋಕೋ ಪುಡಿಗಳನ್ನು ಸೇವಿಸಿವದರಿಂದ ತೊನ್ನು ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ