ಬ್ರೆಡ್ ಫ್ರೆಶ್ ಆಗಿ ಇಡಲು ಈ ಉಪಾಯ ಮಾಡಿ ನೋಡಿ

ಶನಿವಾರ, 10 ನವೆಂಬರ್ 2018 (09:09 IST)
ಬೆಂಗಳೂರು: ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.

ನೀರು ಚಿಮುಕಿಸಿ
ಬ್ರೆಡ್ ತಂದು ಎರಡು ದಿನವಾಯಿತು, ಇನ್ನೇನು ಹಾಳಾಗುತ್ತದೆ ಎಂದಾದರೆ ಸ್ವಲ್ಪ ನೀರು ಚಿಮುಕಿಸಿ ಮೈಕ್ರೋ ಓವನ್ ನಲ್ಲಿಟ್ಟು ಬಿಸಿ ಮಾಡಿ.

‍ಫ್ರೀಜ್ ಮಾಡಿ
ಒಂದು ಗಾಳಿಯಾಡದ ಕವರ್ ನಲ್ಲಿ ಸುತ್ತಿ ಬ್ರೆಡ್ ನಲ್ಲಿ ಫ್ರೀಜ್ ಮಾಡಿ. ಇದರಿಂದ ಫಂಗಸ್ ಬೆಳೆಯುವುದು ಇಲ್ಲವಾಗುತ್ತದೆ.

ಅಲ್ಯುಮಿನಿಯಂ ಕವರ್
ಬ್ರೆಡ್ ನ್ನು ಅಲ್ಯುಮಿನಿಯಂ ಕವರ್ ನಲ್ಲಿ ಗಾಳಿಯಾಡದಂತೆ ಸುತ್ತಿಟ್ಟರೆ ಹೆಚ್ಚು ಸಮಯ ಬಾಳ್ವಿಕೆ ಬರುವುದು.

ಕೋಣೆಯ ಉಷ್ಣತೆಯಲ್ಲಿರಲಿ
ಬ್ರೆಡ್ ನ್ನು ಫ್ರಿಡ್ಜ್ ನಲ್ಲಿಡಬೇಡಿ. ಇದು ಸಾಮಾನ್ಯ ರೂಂ ಟೆಂಪರೇಚರ್ ನಲ್ಲಿಟ್ಟರೆ ಹೆಚ್ಚು ಕಾಲ ಉಳಿಯುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ